ಉಡುಪಿ: ಇಂದು ಬೆಳಗಿನ ಜಾವ ಓಂತಿಬೆಟ್ಟು ಸಮೀಪ ಸಂಭವಿಸಿದ ಅಪಘಾತದಲ್ಲಿ, ಚಾಲಕನ ನಿಯಂತ್ರಣ ತಪ್ಪಿದ ದುರ್ಗಾಂಬಾ ಹೆಸರಿನ ಸ್ಲೀಪರ್ ಬಸ್ ಒಂದು ರಸ್ತೆ ಪಕ್ಕದ ಮೀನೂಟದ ಹೋಟೆಟ್ ಆವರಣಕ್ಕೆ ಡಿಕ್ಕಿ ಹೊಡೆದಿದೆ.

ಉಡುಪಿ ದಿಕ್ಕಿನಿಂದ ಹಿರಿಯಡ್ಕ ಕಡೆಗೆ ಸಾಗುತ್ತಿದ್ದ ದುರ್ಗಾಂಬಾ ಕಂಪೆನಿಯ ಸ್ಲೀಪರ್ ಬಸ್ಸು, ಚಾಲನೆಯ ಸಮಯದಲ್ಲಿ ನಿಯಂತ್ರಣ ತಪ್ಪಿ ಶಮಿತ್ ಹೋಟೆಲ್ ಆವರಣಕ್ಕೆ ನೇರವಾಗಿ ನುಗ್ಗಿದೆ. ನಂತರ ಬಸ್ ಹೋಟೆಲ್‌ನ ಮಾಡಿಗೆ ತಾಗಿ ವಾಲಿಕೊಂಡು ನಿಂತಿದ್ದು, ಸ್ಥಳದಲ್ಲಿ ಕೆಲ ಕ್ಷಣ ಭೀತಿಯ ವಾತಾವರಣ ನಿರ್ಮಾಣಗೊಂಡಿತು.
ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
