18 ಅಡಿ ಎತ್ತರದಿಂದ ಬಿದ್ದು ಪೇಯಿಂಟರ್‌ ಸಾವು

ಬೆಳ್ತಂಗಡಿ: ಸುಮಾರು 18 ಅಡಿ ಎತ್ತರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಪೇಯಿಂಟರ್‌ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ(ನ.17) ಮೃತಪಟ್ಟಿದ್ದಾರೆ.

ಉಜಿರೆಯ ರೆಂಜಾಳ ನಿವಾಸಿ ಪ್ರಮೋದ್ ಗೌಡ (37) ಮೃತ ವ್ಯಕ್ತಿ.

ಸುಮಾರು ಒಂದು ತಿಂಗಳ ಹಿಂದೆ ಪೇಯಿಂಟ್‌ ಬಳಿಯುವ ಕೆಲಸ ಮಾಡುತ್ತಿದ್ದಾಗ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿ ಗಂಭೀರವಾಗಿದ್ದರು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

error: Content is protected !!