ಮಂಗಳೂರು: ಚೇಳೈರು ಗ್ರಾಮ ಪಂಚಾಯತ್ ನಲ್ಲಿದ್ದ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ವರ್ಗಾವಣೆ ಅದ ನಂತರ ಚೇಳೈರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯವರು ನಿಯೋಜನೆ ಮೇಲೆ ಜಿಲ್ಲಾ ಪಂಚಾಯತ್ ನಲ್ಲಿ ಸುಮಾರು ಹಲವಾರು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು ಪ್ರಸ್ತುತ ಜಿಲ್ಲಾ ಪಂಚಾಯತ್ ನಿಂದ ವಾಪಾಸ್ ಚೇಳೈರು ಗ್ರಾಮ ಪಂಚಾಯತ್ ಗೆ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಮೂರು ತಿಂಗಳಾದರೂ ಪಂಚಾಯತ್ ನಲ್ಲಿ ಯಾವುದೇ ಒಂದು ಅಭಿವೃದ್ಧಿ ಕೆಲಸವಾಗುತ್ತಿಲ್ಲ, ಬಡ ಜನರ ಸಮಸ್ಯೆಗೆ ಸ್ಪಂದನೆ ಸಿಗುತ್ತಿಲ್ಲ ಬಿಕೋ ಎನ್ನುವ ಪರಿಸ್ಥಿತಿ ಪಂಚಾಯತ್ ನಲ್ಲಿದೆ ಯಾವ ಪುರುಷಾರ್ಥಕ್ಕೆ ಪಂಚಾಯತ್ ನಲ್ಲಿ ಕುಳಿತಿದ್ದೀರಿ ಎಂದು ಅಭಿವೃದ್ಧಿ ಅಧಿಕಾರಿಯವರನ್ನು ಪಂಚಾಯತ್ ಸದಸ್ಯರು ದೂರಿಕೊಂಡ ಘಟನೆ ಚೇಳೈರು ಗ್ರಾಮ ಪಂಚಾಯತ್ ನಲ್ಲಿ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಗ್ರಾಮಸಭೆಯಲ್ಲಿ ನಡೆಯಿತು. ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಮಾತನಾಡಿ ಅಭಿವೃದ್ಧಿ ಅಧಿಕಾರಿಯವರಿಗೆ ಪಂಚಾಯತ್ ನ ಕೆಲಸಗಳು ಹೊಸ ಅನುಭವ ಜೊತೆಗೆ ಸರ್ವರ್ ಸಮಸ್ಯೆಯಿಂದಾಗಿ ಅಭಿವೃದ್ಧಿ ಕೆಲಸಗಳು ಅಗುತ್ತಿಲ್ಲ ಮೇಲಿನ ಅಧಿಕಾರಿಗಳ ಗಮನಕ್ಕೆ ಈಗಾಗಲೇ ತರಲಾಗಿದೆ ಮುಂದೆ ತಂದು ಸರಿಪಡಿಸಲಾಗುವುದು ಎಂದರು.

ಮಧ್ಯ ಕೆಂಪುಗುಡ್ಡೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಜಾಗದಲ್ಲಿ ಬೇರೆ ಒಬ್ಬರು ಮನೆ ಕಟ್ಟಿ ಕುಳಿತಿದ್ದು, ಆ ಮನೆ ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ ಅವರಿಗೆ ಮನೆ ಅಡಿಯಷ್ಟು ಜಾಗ ನೀಡಿ ಉಳಿದ ಜಾಗವನ್ನು ತೆರವುಗೊಳಿಸಬೇಕು ಇಲ್ಲದಿದ್ದರೆ ಅಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಅಡಚಣೆಯಾಗುತ್ತಿದ್ದು ಆ ಮನೆಯನ್ನು ತೆರವುಗೊಳಿಸಿ ಅದಷ್ಟು ಬೇಗ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನಿವೇಶನ ಇಲ್ಲದವರಿಗೆ ನಿವೇಶನ ನೀಡಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಅದಷ್ಟು ಶೀಘ್ರವಾಗಿ ನಿವೇಶನ ನೀಡಲಾಗುವುದು ಎಂದರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅಭಿವೃದ್ಧಿ ಕಾಮಗಾರಿಯ ಪಟ್ಟಿಯನ್ನು ಗ್ರಾಮಸಭೆಯಲ್ಲಿ ತಿಳಿಸಬೇಕು ಎಂದು ಗ್ರಾಮಸ್ಥರು ಕೇಳಿದಾಗ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಮುಂದಿನ ಗ್ರಾಮ ಸಭೆಯಲ್ಲಿ ನೀಡುವುದಾಗಿ ತಿಳಿಸಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೇಖಾ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್, ಗ್ರಾಮ ಆಡಳಿತ ಅಧಿಕಾರಿ ಸುಲೋಚನ , ಪಂಚಾಯತ್ ಕಾರ್ಯದರ್ಶಿ ಲೋಕನಾಥ್ ಭಂಡಾರಿ, ಲೆಕ್ಕಾಧಿಕಾರಿ ಸುರೇಶ್, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.