ಮಂಗಳೂರು: ಗಂಜಿಮಠದ ಮೊಗರು ಗ್ರಾಮದ ದೇವರಗುಡ್ಡೆಯ ಶ್ರೀಸೂರ್ಯನಾರಾಯಣ ದೇವಸ್ಥಾನದ ಗರ್ಭಗುಡಿಯಲ್ಲಿ ಪಾದುಕಾ ಶಿಲಾನ್ಯಾಸವು ಸೋಮವಾರ ಬೆಳಗ್ಗೆ 8.30ರ ಶುಭ ಲಗ್ನದಲ್ಲಿ ಪೊಳಲಿ ಶ್ರೀಸುಬ್ರಮಣ್ಯ ತಂತ್ರಿ ಅವರ ಉಪಸ್ಥಿತಿಯಲ್ಲಿ ಭಕ್ತಿಭಾವದಿಂದ ಜರಗಿತು. ಈ ಸಂದರ್ಭದಲ್ಲಿ ಡಿಸೆಂಬರ್ 7ರಂದು ನಡೆಯಲಿರುವ ಷಡಾಧಾರ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.








ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶೇಖರ ಜೋಗಿ, ಟ್ರಸ್ಟ್ ಅಧ್ಯಕ್ಷ ಭಾಸ್ಕರ ಕುಲಾಲ್, ಪ್ರಶಾಂತ್ ಕುಮಾರ್ ಜೈನ್ ಕಟ್ಟೆಮಾರ್, ಉದಯಕುಮಾರ್ ಆಳ್ವ ಉಳಿಪಾಡಿಗುತ್ತು, ಪ್ರೇಮಚಂದ್ರ ನಾಯಕ್, ಗಂಗಾಧರ ಜೋಗಿ ಮಟ್ಟಿ, ಹರೀಶ್ ಮಟ್ಟಿ, ಶೋಹನ್ ಅತಿಕಾರಿ, ಬೂಬ ಪೂಜಾರಿ, ಅಕ್ಷಯ್ ಕುಮಾರ್ ಜೈನ್, ರಾಮಚಂದ್ರ ಅತಿಕಾರಿಬೆಟ್ಟು, ಪದ್ಮನಾಭ ದೇವರಗುಡ್ಡೆ, ಜಯರಾಮ ಶೆಟ್ಟಿ, ಪಂಚಾಯತ್ ಸದಸ್ಯರಾದ ಸುನಿಲ್ ಜಿ, ತಮ್ಮಯ್ಯ ಪೂಜಾರಿ, ವಿನಯ ರೈ, ಸುಮಿತ್ರ ಹಾಗೂ ಜೀರ್ಣೋದ್ದಾರ ಸಮಿತಿ, ಟ್ರಸ್ಟ್ ಸದಸ್ಯರು ಮತ್ತು ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
