ಕಾಟಿಪಳ್ಳ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಉದ್ಘಾಟನಾ ಕಾರ್ಯಕ್ರಮ

ಮಂಗಳೂರು: ಕ್ರೀಡೆ ಕೇವಲ ಸ್ಪರ್ದೆ ಅಲ್ಲ ಅದು ಜೀವನದ ಪಾಠ ಇದು ಶಿಸ್ತು ತಂಡದ ಸಹಕಾರ ಮತ್ತು ನಾಯಕತ್ವವನ್ನು ಕಲಿಸುತ್ತದೆ. ಸವಾಲು ಎದುರಿಸಲು ಕ್ರೀಡಾ ಮನೋಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾಗಿದೆ ಎಂದು ಎಂ,ಅರ್,ಪಿ,ಎಲ್ ಜಾನಕಿ ಕನ್ ಸ್ಟಕ್ಷನ್ ಮಾಲಕರಾದ ಧರ್ಮೆಂದ್ರ ಗಣೇಶಪುರ ನುಡಿದರು. ಅವರು ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2025-26 ನೇ ಸಾಲಿನ ಕಾಟಿಪಳ್ಳ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು ಸೋಲು ಗೆಲುವು ಸ್ವಾಭಾವಿಕ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಗೆಲುವಿನತ್ತಾ ಸಾಗಬೇಕು ಎಂದರಲ್ಲದೆ ಈ ಶಾಲೆಯು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಶಾಲೆಯಾಗಿದ್ದು ಇತರ ಶಾಲೆಗೆ ಮಾದರಿಯಾಗಿದೆ ಎಂದರು.

ವೇದಿಕೆಯಲ್ಲಿ ಪಡುಪದವು ಉದ್ಯಮಿ ಸಂದೀಪ್ ಪಡುಪದವು, ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್,ಕೋಶಾಧಿಕಾರಿ ವಿಠಲ ಶೆಟ್ಟಿ, ಶಿಕ್ಷಣ ಇಲಾಖೆಯ ಇ.ಸಿ.ಒ ಅನಿತಾ,ಬಿ.ಅರ್ ಪಿ ಹರೀಶ್,ಸಿ ಅರ್ ಪಿ ಸಿಖಂದರ್,ಪ್ರಸಾದ್,ಮಂಗಳೂರು ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್,ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಅನಿಲ್ ಸಾಲ್ಯಾನ್, ಸದಸ್ಯರಾದ ದಿನೇಶ್,ಪರಮೇಶ್ವರ್,ಕುಸುಮಾಕರ ಶೆಟ್ಟಿ, ಸವಿತಾ ಕುಲಾಲ್,ರಿತೇಶ್ ಶೆಟ್ಟಿ, ಸತೀಶ್ ಲೂಯಿಸ್,ಬಾಲಕೃಷ್ಣ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪ್ರಪುಲ್ಲ ಪಂಜ ವಹಿಸಿದ್ದರು. ಮುಖ್ಯ ಶಿಕ್ಷಕಿ ಜೇನ್ ಡಿಸೋಜಾ ಸ್ವಾಗತಿಸಿ, ಸಹ ಶಿಕ್ಷಕಿ ಶೈಲಾ ಕಾರ್ಯಕ್ರಮ ನಿರೂಪಿಸಿದರು

error: Content is protected !!