ಪಣಂಬೂರು ಭೀಕರ ಅಪಘಾತಕ್ಕೆ ಮೂವರು ಬಲಿ- ಟ್ಯಾಂಕರ್ ಚಾಲಕ ಸೆರೆ: ಬೀಡಾಡಿ ದನಗಳ ನಿಯಂತ್ರಣಕ್ಕೆ ಹೆಚ್ಚಿದ ಆಗ್ರಹ

ಪಣಂಬೂರು: ಪಣಂಬೂರು ಪ್ರದೇಶದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಟ್ಯಾಂಕರ್ ಚಾಲಕ ಮೊಹಮ್ಮದ್ ಶೈಖೀ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


ಆಟೋ ಚಾಲಕ, ಉಳ್ಳಾಲ ನಿವಾಸಿ ಮೊಹಮ್ಮದ್ ಕುಂಚಿ (25), ಕೊಣಾಜೆ ಮೊಂಟೆಪದವು ನಿವಾಸಿಗಳಾದ ಅಬೂಬಕರ್ (65) ಹಾಗೂ ಇಬ್ರಾಹಿಂ (68) ಮೃತ ದುರ್ದೈವಿಗಳು. ಅಪಘಾತದಲ್ಲಿ ಇನ್ನೋವಾ ಕಾರಿನ ಪ್ರಯಾಣಿಕ ಆನಂದ ಸಾನಿಲ್ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೀಡಾಡಿ ದನದಿಂದ ಅಫಘಾತ

ಬೀಡಾಡಿ ದನಗಳ ಹಾವಳಿಯಿಂದ ಮೂವರು ಪ್ರಾಣ ಕಳೆದುಕೊಂಡಿದ್ದು, ಇವುಗಳನ್ನು ಹಿಡಿದು‌ಗೋಶಾಲೆಗೆ ಒಪ್ಪಿಸುವಂತೆ ಆಗ್ರಹ ಕೇಳಿಬಂದಿದೆ.

ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಸಿಗ್ನಲ್ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿತ್ತು.. ರಿಕ್ಷಾ ದಲ್ಲಿ ಮೂರು ಗೋಣಿ ತಂಬಾಕು ಇದ್ದು ರಕ್ತಸಿಕ್ತವಾಗಿದೆ. ಇನ್ನೋವದಲ್ಲಿದ್ದವರು ಪವಾಡ ಸದೃಶ ಪಾರಾಗಿದ್ದಾರೆ‌.

ಪಣಂಬೂರು ಬಳಿ ಬೀಡಾಡಿ ದನ ಏಕಾಏಕಿ ರಸ್ತೆ ಮಧ್ಯೆ ಬಂದಿದ್ದು, ಈ ವೇಳೆ ಅದರ ಹಿಂದಿನಲ್ಲಿದ್ದ ಬುಲೆಟ್ ಟ್ಯಾಂಕರ್ ಒಮ್ಮೆಲೆ ಬ್ರೇಕ್ ಹಾಕಿದ್ದಾನೆ. ಇದರ ಹಿಂದೆ ಇದೇ ನತದೃಷ್ಟ ರಿಕ್ಷಾ ಇದ್ದು ಇದರ ಹಿಂದೆ ಇನ್ನೋವಾ ಕಾರು ಹಾಗೂ ಅದರ ಹಿಂದೆ ಮತ್ತೊಂದು ಬುಲೆಟ್ ಟ್ಯಾಂಕರ್ ಇತ್ತು.

ಇನ್ನೋವಾ ಕಾರಿನವನು ಕಾರನ್ನು ಒಮ್ಮೆಲೆ ಎಡಬದಿಗೆ ಸರಿದಿದ್ದು ಇದರ ಹಿಂದೆ ವೇಗವಾಗಿ ಬಂದ ಬುಲೆಟ್ ಟ್ಯಾಂಕರ್ ಇನ್ನೋವಾಗೆ ಡಿಕ್ಕಿ ಹೊಡೆದು ಅಲ್ಲಿಂದ ನೇರವಾಗಿ ರಿಕ್ಷಾಗೆ ಢಿಕ್ಕಿ ಹೊಡೆದಿದೆ. ಇದರಿಂದಾಗಿ ರಿಕ್ಷಾ ಮುಂದೆ ಇದ್ದ ಬುಲೆಟ್ ಟ್ಯಾಂಕರ್‌ಗೆ ಬಡಿದು ಎರಡು ಲಾರಿಗಳ ಮಧ್ಯೆ ಅಪ್ಪಚ್ಚಿಯಾಗಿ ಮೂವರು ಭೀಕರವಾಗಿ ಮೃತ ಪಟ್ಟಿದ್ದಾರೆ.

ರಿಕ್ಷಾದಲ್ಲಿ ಸಿಲುಕಿದ್ದವರನ್ನು ಹರಸಾಹಸ ಪಟ್ಟು ಹೊರತೆಗೆಯಲಾಯಿತು. ಕ್ರೇನ್ ಮೂಲಕ ರಿಕ್ಷಾ ತೆರವು ಮಾಡಲಾಗಿದ್ದು ಸುಮಾರು ಒಂದು ಗಂಟೆ ಕಾಲ ಟ್ರಾಪಿಕ್ ಜಾಂ ಉಂಟಾಗಿತ್ತು.

 

ಬೀಡಾಡಿ ದನಗಳ ನಿಯಂತ್ರಣಕ್ಕೆ ಆಗ್ರಹ:

ಪಣಂಬೂರು ಭಾಗದಲ್ಲಿ ಹಲವಾರು ಬೀಡಾಡಿ ದನಗಳಿದ್ದು ಇವುಗಳಿಂದ ಸಾಕಷ್ಟು ಅಪಘಾತ ಸಂಭವಿಸಿದೆ. ಹಲವಾರು ಸಮಯಗಳಿಂದ ಬೀಡಾಡಿ ದನಗಳು ರಸ್ತೆ ಮಧ್ಯೆ ಬಂದು ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿವೆ. ಇವುಗಳು ಯಾರ ದನಗಳೆಂದು ತಿಳಿದು ಬಂದಿಲ್ಲ. ಕೆಲವರು ದನ ಸಾಕಿದವರು ಅವುಗಳನ್ನು ಎಲ್ಲೆಂದರಲ್ಲಿ ಬಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಲವು ದನಗಳಿಗೆ ಮಾಲಕರೇ ಇಲ್ಲದಿದ್ದು ಅವುಗಳು ರಸ್ತೆಯಲ್ಲೇ ಸಂಚರಿಸಿ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದೆ. ಇವುಗಳನ್ನು ಹಿಡಿದು ಗೋಶಾಲೆಗೆ ಒಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇನ್ನೊಮ್ಮೆ ಇಂತಹ ದುರಂತ ನಡೆಯದಂತೆ ಪಶು ಇಲಾಖೆ ಈ ಗೋವುಗಳನ್ನು ಹಿಡಿದು ಗೋಶಾಲೆಗೆ ಒಪ್ಪಿಸುವ ಮೂಲಕ ಇಂತಹ ದುರಂತ ಸಂಭವಿಸದಂತೆ ಎಚ್ಚರ ವಹಿಸಬೇಕಿದೆ.

error: Content is protected !!