ಸುರತ್ಕಲ್: ಕಾಟಿ ಪಳ್ಳದ ಮಿಸ್ಬಾ ನಾಲೇಜ್ ಫೌಂಡೇಶನ್ ಕಾಲೇಜಿನ ವಠಾರದಲ್ಲಿ, ಬಾವ ಫೌಂಡೇಶನ್ ವತಿಯಿಂದ ಶುಕ್ರವಾರ(ನ.14) ನಿಧನ ಹೊಂದಿದ ಪದ್ಮಶ್ರೀ ಪುರಸ್ಕೃತೆ ಶತಾಯುಷಿ ಸಾಲುಮರದ ತಿಮ್ಮಕ್ಕನಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮ ನಡೆಯಿತು.

ಫೌಂಡೇಶನ್ ಸ್ಥಾಪಕ ಮಾಜಿ ಶಾಸಕ ಮೊದೀನ್ ಬಾವಾ ಅವರು ನುಡಿ ನಮನ ಸಲ್ಲಿಸಿ ಸಾವಿರಾರು ಸಸಿಗಳನ್ನು ನೆಟ್ಟು ಬೃಹತ್ ಮರವನ್ನಾಗಿ ಮಕ್ಕಳಂತೆ ಬೆಳೆಸಿ ಪೋಷಿಸಿದಾಗ ಕೀರ್ತಿ ಅವರದು. ಪರಿಸರಕ್ಕೆ ಅವರು ಕೊಟ್ಟ ಕೊಡುಗೆ ಅಸಾಮಾನ್ಯವಾಗಿದ್ದು, ಭಾರತ ಸರಕಾರ ಪದ್ಮಶ್ರೀ ನೀಡಿ ಪುರಸ್ಕರಿಸಿದೆ.ನಾವೆಲ್ಲ ಅವರನ್ನು ತೆಗೆದುಕೊಂಡು ಪರಿಸರ ಉಳಿಸಲು ಸಂಕಲ್ಪ ತೊಡಬೇಕಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಝಯಿದ ಜಲೀಲ್ ಅವರು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ದೇಶ ಕಂಡ ಅಪರೂಪದ ನಾರಿ ಶಕ್ತಿಯಾಗಿದ್ದರು ಎಂದು ಸ್ಮರಿಸಿಕೊಂಡರು.
ಶಿಕ್ಷಕರಾದ ಮುಫೀದಾ, ಕನಕದಾಸ್ ಕೂಳೂರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.