ನವೆಂಬರ್ 16ರಂದು ನಂದಿನಿಯಿಂದ ಎರಡು ಹೊಸ ಉತ್ಪನ್ನಗಳ ಬಿಡುಗಡೆ:‌ ಮೊದಲು ಬರುವ ಗ್ರಾಹಕರಿಗೆ ಉಚಿತ!

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಕುಲಶೇಖರವು ನಂದಿನಿ ಉತ್ಪನ್ನಗಳ ಶ್ರೇಣಿಗೆ ಎರಡು ಹೊಸ ಉತ್ಪನ್ನಗಳನ್ನು ಸೇರಿಸಿದೆ. ʻನಂದಿನಿ ಸೀಡ್ಸ್ ಡಿಲೈಟ್’ (12 ಗ್ರಾಂ) ಮತ್ತು ‘ನಂದಿನಿ ಗುವಾ ಚಿಲ್ಲಿ ಲಸ್ಸಿ’ (160 ಮಿ.ಲೀ. ಅನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಾರುಕಟ್ಟೆಗೆ ನೂತನವಾಗಿ ಬಿಡುಗಡೆ ಮಾಡಲು ಒಕ್ಕೂಟವು ನಿರ್ಧರಿಸಿದೆ. ಈ ಉತ್ಪನ್ನವನ್ನು ಮೊದಲು ಬರುವ ಗ್ರಾಹಕರಿಗೆ ದಾಸ್ತಾನು ಮುಗಿಯುವವರೆಗೆ ಉಚಿತವಾಗಿ ವಿತರಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು ಹೇಳಿದ್ದಾರೆ.

ಕುಲಶೇಖರದ ನಂದಿನಿ ಡೈರಿ ಒಕ್ಕೂಟದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹೊಸ ಉತ್ಪನ್ನಗಳ ಬಿಡುಗಡೆ ನವೆಂಬರ್ 16, 2025 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರುಗಲಿರುವ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ನಡೆಯಲಿದೆ ಎಂದರು.

ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಉದ್ದೇಶದಿಂದ ವೆಂಬರ್ 17, 2025 ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಎಲ್ಲಾ ನಂದಿನಿ ಪಾರ್ಲರ್‌ಗಳು, ಫ್ರಾಂಚೈಸಿ ಮತ್ತು ಡೀಲರ್ ಕೇಂದ್ರಗಳಲ್ಲಿ ಮೊದಲು ಬರುವ ಗ್ರಾಹಕರಿಗೆ ದಾಸ್ತಾನು ಮುಗಿಯುವವರೆಗೆ ಉಚಿತವಾಗಿ ಈ ಎರಡೂ ಉತ್ಪನ್ನಗಳನ್ನು ವಿತರಿಸಲಾಗುವುದು ಎಂದು ರವಿರಾಜ ಹೆಗ್ಡೆ ಪ್ರಕಟಿಸಿದರು.

ಉತ್ಪನ್ನಗಳ ವಿಶೇಷತೆ
ಸೀಡ್ಸ್ ಡಿಲೈಟ್ ಅ‌ನ್ನು ಕಲ್ಲಂಗಡಿ ಬೀಜ, ಸಿಹಿ ಕುಂಬಳಕಾಯಿ ಬೀಜ, ಅಗಸೆ ಬೀಜ, ಬಾದಾಮಿ, ಸಕ್ಕರೆ, ನಂದಿನಿ ಹಾಲು, ತುಪ್ಪ ಮತ್ತು ಕೋವಾ ಬಳಸಿ ಆಧುನಿಕ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ಈ ಉತ್ಪನ್ನದಲ್ಲಿ ಪ್ರೋಟೀನ್, ಫೈಬರ್, ವಿಟಮಿನ್‌ಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿದ್ದು, ಹೃದಯದ ಆರೋಗ್ಯ ಸುಧಾರಣೆ, ತೂಕ ನಿಯಂತ್ರಣ, ಉತ್ತಮ ಜೀರ್ಣಕ್ರಿಯೆ, HDL ಕೊಲೆಸ್ಟ್ರಾಲ್ ಹಾಗೂ ರಕ್ತದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಸಹಕಾರಿಯಾಗಲಿದೆ ರವಿರಾಜ ಹೆಗ್ಡೆ ಹೇಳಿದರು.

ಗುವಾ ಚಿಲ್ಲಿ ಲಸ್ಸಿಯನ್ನು ಪೇರಳೆ ಹಣ್ಣಿನ ತಿರುಳು, ಉಪ್ಪು, ಸಕ್ಕರೆ, ಮೆಣಸಿನ ಹುಡಿ, ನಿಂಬೆ ರಸ ಮತ್ತು ನಂದಿನಿ ಮೊಸರು ಬಳಸಿ ತಯಾರಿಸಲಾಗಿದೆ. ಈ ಉತ್ಪನ್ನದಲ್ಲಿರುವ ಕ್ಯಾಲ್ಸಿಯಂ, ವಿಟಮಿನ್–ಸಿ, ಪೊಟ್ಯಾಶಿಯಮ್ ಮುಂತಾದ ಪೋಷಕಾಂಶಗಳು ಮೂಲೆಗಳ ಬಲವರ್ಧನೆ, ಹೃದಯ ಮತ್ತು ತ್ವಚೆಯ ಆರೋಗ್ಯ ವೃದ್ಧಿ, ಉತ್ತಮ ಜೀರ್ಣಕ್ರಿಯೆ, ರಕ್ತದೊತ್ತಡ ನಿಯಂತ್ರಣ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುವವು ಪೂರ್ವ ಮಾರುಕಟ್ಟೆ ಪರೀಕ್ಷೆಯಲ್ಲಿ ಈ ಎರಡೂ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಎಲ್ಲಾ ಸಂದರ್ಭಗಳಲ್ಲಿ ಬಳಸಲು ಯೋಗ್ಯವಾಗಿದೆ ಎಂದು ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ದೇವಿಪ್ರಸಾದ್‌ ಶೆಟ್ಟಿ ಬೆಳಪು, ವೀವೇಕ್ ನಿರ್ದೇಶಕರುಗಳಾದ ಮಮತಾ ಶೆಟ್ಟಿ, ನಂದರಾಂ ರೈ, ಸುಧಾಕರ್ ಶೆಟ್ಟಿ ಮುಡಾರು, ಚಂದ್ರಶೇಖರ್,‌ ಒಕ್ಕೂಟದ ಮ್ಯಾನೇಜರ್ ವಿರಾಜ್ ರೂಪ, ಡೈರಿ ಮ್ಯಾನೇಜರ್‌ ಗುರುಪ್ರಸಾದ್ ಮತ್ತಿತರಿದ್ದರು.

error: Content is protected !!