ನವದೆಹಲಿ: ದೇಶದ ಭದ್ರತಾ ಸಂಸ್ಥೆಗಳು ಎರಡು ಭಯೋತ್ಪಾದಕ ದಾಳಿಗಳನ್ನು ತಡೆಗಟ್ಟುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಜಮ್ಮು–ಕಾಶ್ಮೀರ ಪೊಲೀಸರು ದೆಹಲಿ ಬಳಿಯ ಫರಿದಾಬಾದ್‌ನಲ್ಲಿ ಮತ್ತು ಗುಜರಾತ್ ATS ತಂಡವು ಹೈದರಾಬಾದ್‌ನಲ್ಲಿ ವೈದ್ಯರ ವೇಷದಲ್ಲಿದ್ದ ಉಗ್ರರನ್ನು ಬಂಧಿಸಿದೆ.

ಈ ಬಾರಿ ಉಗ್ರರು ಕೆಮಿಕಲ್ ಬಂಬ್ ತಯಾರಿಸಿ ಭಾರತೀಯರನ್ನು ರೋಗ ಬರಿಸಿ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಯಾಕೆಂದರೆ ಈ ಬಾರಿ ಉಗ್ರರಿಂದ 4 ಲೀಟರ್ ಕ್ಯಾಸ್ಟರ್ ಆಯಿಲ್ ಎಂಬ ವಿನಾಶಕಾರಿ ವಸ್ತುವನ್ನು ರಿಸಿನ್ ಎಂಬ ಪ್ರಬಲ ವಿಷ ತಯಾರಿಸಿ ಇಡೀ ದೇಶದಲ್ಲಿ ರೋಗ ಹರಡಿಸಲು ಮುಂದಾಗಿದ್ದರು ಎನ್ನುವುದು ಪತ್ತೆಯಾಗಿದೆ.
ಫರಿದಾಬಾದ್‌ನಲ್ಲಿ ಬಂಧಿತರಾದ ಡಾ. ಆದಿಲ್ ಅಹ್ಮದ್ ರಾಥರ್ ಮತ್ತು ಮುಜಮ್ಮಿಲ್ ಶಕೀಲ್ ಅವರಿಂದ 350 ಕೆ.ಜಿ. ಅಮೋನಿಯಂ ನೈಟ್ರೇಟ್, ಎರಡು ಅಸಾಲ್ಟ್ ರೈಫಲ್‌ಗಳು, ಡಿಟೋನೇಟರ್‌ಗಳು ಹಾಗೂ ಮದ್ದುಗುಂಡುಗಳು ವಶಪಡಿಸಿಕೊಳ್ಳಲಾಗಿದೆ. ಇವರಲ್ಲಿ ಒಬ್ಬರು ಕಾಶ್ಮೀರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನೊಂದು ಘಟನೆಯಲ್ಲಿ, ಗುಜರಾತ್ ATS ಡಾ. ಅಹ್ಮದ್ ಮೊಹಿಯುದ್ದೀನ್ ಸಯ್ಯದ್ ಅವರನ್ನು ಮೂರು ಪಿಸ್ತೂಲ್‌ಗಳು, 30 ಗುಂಡುಗಳು ಮತ್ತು 4 ಲೀಟರ್ ಕ್ಯಾಸ್ಟರ್ ಆಯಿಲ್ ಸಹಿತ ಬಂಧಿಸಿದೆ. ಈ ಕ್ಯಾಸ್ಟರ್ ಆಯಿಲ್‌ನ್ನು ರಿಸಿನ್ ಎಂಬ ಅತ್ಯಂತ ಪ್ರಬಲ ವಿಷ ತಯಾರಿಸಲು ಬಳಸಲಾಗುತ್ತದೆ.

ಸಯ್ಯದ್‌ಗೆ ಐಸಿಸ್‌ನ ಖೋರಾಸನ್ ಪ್ರಾಂತ್ಯದ (ISKP) ಸಂಪರ್ಕವಿದ್ದು, ಪಾಕಿಸ್ತಾನದ ಲಷ್ಕರ್-ಎ-ತೈಬಾ ಸಂಘಟನೆ ಮತ್ತು ಐಸಿಸ್ ನಡುವಿನ ಮೈತ್ರಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬುದನ್ನು ತನಿಖಾ ಸಂಸ್ಥೆಗಳು ದೃಢಪಡಿಸಿವೆ.
ಬಂಧಿತರಾದ ಉಗ್ರರು ದೆಹಲಿ, ಲಖ್ನೋ ಅಥವಾ ಅಹಮದಾಬಾದ್‌ನಲ್ಲಿನ ಸೂಕ್ಷ್ಮ ಸ್ಥಳಗಳನ್ನು ಗುರಿಯಾಗಿಸಿಕೊಂಡು, ರಾಸಾಯನಿಕ ದಾಳಿ ಮಾಡಲು ಯೋಜಿಸಿದ್ದರು ಎಂದು ATS ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಸ್ವೀಕರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಭದ್ರತಾ ಸಂಸ್ಥೆಗಳು ಇವರ ಹಣದ ಹರಿವು ಹಾಗೂ ನೆಟ್ವರ್ಕ್ ಕುರಿತು ವ್ಯಾಪಕ ತನಿಖೆ ನಡೆಸುತ್ತಿವೆ.