ಮಂಗಳೂರು : ಡಿ.25,26 ರಂದು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವಾಕ್ಷರಿ ಮಹಾಮಂತ್ರ ಯಾಗ

ಮಂಗಳೂರು : ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಡಿಸೆಂಬರ್ 25 ರಿಂದ 26 ರ ವರೆಗೆ ನವಾಕ್ಷರಿ ಮಹಾಮಂತ್ರ ಯಾಗ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾಡಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಮಂಗಳೂರು ತಾಲೂಕಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಕೂಡಾ ಒಂದೆನಿಸಿರುತ್ತದೆ. ಈ ಕ್ಷೇತ್ರವು ಸಹಸ್ರಾರು ಸಂಖ್ಯೆಯ ಭಕ್ತರ ಆರಾಧನ ಸ್ಥಳವೆನಿಸಿದೆ. ವರ್ಷಂಪ್ರತಿ ಕುಂಭ ಮಾಸದ ಶುಕ್ಲ ಪಕ್ಷದಲ್ಲಿ ಅಂದರೆ ಫೆಬ್ರವರಿ ಅಥವ ಮಾರ್ಚ್ ತಿಂಗಳಲ್ಲಿ ನಡೆಯುವ ವರ್ಷಾವಧಿ ಮಹಾಪೂಜೆಯ ಸಂದರ್ಭ ಇಲ್ಲಿ ಸೇರುವ ಭಕ್ತ ಜನಸ್ತೋಮ ಈ ಕ್ಷೇತ್ರದ ಕಾರಣೀಕ ಹಾಗೂ ಪ್ರಸಿದ್ದಿಗೆ ಉದಾಹರಣೆಯಾಗಿದೆ ಎಂದು ಆಡಳಿತ ಮೊಕ್ತಸರ ಲಕ್ಷ್ಮಣ್ ಅಮೀನ್ ಕೋಡಿಕಲ್ ತಿಳಿಸಿದ್ದಾರೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಉರ್ವ ಶ್ರೀ ಮಾರಿಯಮ್ಮ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಿಮಿತ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ವೈಭವದಿಂದ ಸಂಪನ್ನವಾಗಿದ್ದು, ಅದಕ್ಕೆ ಪೂರಕವಾಗಿ ಈ ಬಾರಿ ಗ್ರಾಮ ಕ್ಷೇಮ ಮತ್ತು ಲೋಕ ಕಲ್ಯಾಣರ್ಥವಾಗಿ ಹಾಗೂ ಸಾನಿಧ್ಯ ಶ್ರೇಯೋಭಿವೃದ್ಧಿಗಾಗಿ “ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗ”ವನ್ನು ನೆರೆವೇರಿಸಲು ನಿಶ್ಚಯಿಸಲಾಗಿರುತ್ತದೆ‌ ಎಂದರು.

ಕ್ಷೇತ್ರದ ತಂತ್ರಿವರ್ಯರಾದ ಕೋಡಿಕಲ್ ಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದ ಪೌರೋಹಿತ್ವದಲ್ಲಿ ದಿನಾಂಕ 25-12-2025ನೇ ಗುರುವಾರ ಹಾಗೂ ದಿನಾಂಕ 26-12-2025ನೇ ಶುಕ್ರವಾರ ಈ ಎರಡು ದಿನಗಳಲ್ಲಿ ಕ್ಷೇತ್ರದಲ್ಲಿ “ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗದ ವೈದಿಕ ವಿಧಿ-ವಿಧಾನಗಳು ನಡೆಯಲಿದ್ದು, ಈ ಮಹಾಮಂತ್ರ ಯಾಗವು ವಿಶಿಷ್ಠವಾದ ಯಾಗವಾಗಿದ್ದು, ಮಹಾದೇವಿಗೆ ತುಂಬಾ ಪ್ರಿಯವಾದ ಶ್ರೇಷ್ಠ ಯಾಗವೆನಿಸಿದೆ ಎಂದರು.

ಈ ನವಾಕ್ಷರಿ ಯಾಗ ನಡೆಯಲಿರುವ ಎರಡು ದಿನಗಳಲ್ಲಿ ವಿವಿಧ ವೈದಿಕ ಆಚರಣೆಗಳು ಜರಗಲಿದ್ದು, ಮಹಾ ಅಭಿಷೇಕ, ಮಹಾರಂಗಪೂಜೆ, ಶ್ರೀ ದೇವಿಯ ದರ್ಶನ ಬಲಿ, ದೀಪೋತ್ಸವ, ರಥೋತ್ಸವ ಮತ್ತು ಮಹಾ ಅನ್ನಸಂತರ್ಪಣೆ ಕೂಡಾ ನೆರವೇರಲಿರುವುದು. ಇದೇ ಸಂದರ್ಭ ದ.ಕ. ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ, ಆಯ್ದ ಭಜನಾ ತಂಡಗಳಿಂದ ಹರಿನಾಮ ಸಂಕೀರ್ತನೆ, ಯಕ್ಷ ತೆಲಿಕೆ – ಹಾಸ್ಯ ವೈಭವ ಕಾರ್ಯಕ್ರಮ, ಚಾ ಪಠ್ಯ ಕಲಾವಿದರಿಂದ ತುಳು ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಪರೂಪದ ಈ ವಿಶಿಷ್ಟ ಮಹಾಯಾಗಕ್ಕೆ ಮತ್ತು ಈ ಸಂದರ್ಭ ನಡೆಯಲಿರುವ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಗೆ ತಾವು ತಮ್ಮ ಪ್ರಚಾರ ಮಾಧ್ಯಮದ ಮೂಲಕ ವಿಶೇಷ ರೀತಿಯಲ್ಲಿ ಪ್ರಚಾರದ ಸಹಕಾರ ಕೊಟ್ಟು, ನಮ್ಮ ಕ್ಷೇತ್ರದಲ್ಲಿ ನಡೆಯಲಿರುವ ಈ ಮಹಾ ಸತ್ಕಾರ್ಯವು ಸಂಪೂರ್ಣ ಯಶಸ್ವಿಯಾಗುವಂತೆ ಪ್ರೋತ್ಸಾಹಿಸಬೇಕಾಗಿ ಈ ಮೂಲಕ ಮನವಿ ಮಾಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಅನೀಲ್ ಕುಮಾರ್ ಬೊಕ್ಕಪಟ್ಣ, ಲೋಕೇಶ್ ಸುವರ್ಣ ಕುದ್ರೋಳಿ 3 (ಅಧ್ಯಕ್ಷರು, ಮಂಗಳುರು ಏಳು ಪಟ್ಟ ಮೊಗವೀರ ಸಂಯುಕ್ತ ಸಭಾ)
ಶ್ರೀ ಮೋಹನ್ ಬೆಂಗ್ರೆ, ಉಪಾಧ್ಯಕ್ಷರು, ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ, ಗೌತಮ್ ಸಾಲ್ಯಾನ್ ಕೋಡಿಕಲ್ (ಸಂಚಾಲಕರು, ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗ ಸಮಿತಿ),ಜಗದೀಶ್ ಬಂಗೇರ ಬೋಳೂರು (ಪ್ರಧಾನ ಕಾರ್ಯದರ್ಶಿ, ಮಂಗಳುರು ಏಳು ಪಟ್ಟ ಮೊಗವೀರ ಸಂಯುಕ್ತ ಸಭಾ) ಉಪಸ್ಥಿತರಿದ್ದರು.

error: Content is protected !!