ಆಟದ ಮಧ್ಯೆ ಎಲ್‌ಐಸಿ ಅಧಿಕಾರಿ ಕುಸಿದು ಬಿದ್ದು ಸಾವು !

ಉತ್ತರ ಪ್ರದೇಶ : ಕ್ರಿಕೆಟ್ ಆಡುತ್ತಿದ್ದ ಎಲ್ಐಸಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮೈದಾನದಲ್ಲೇ ಕುಸಿದು ಬಿದ್ದು, ಮೃತಪಟ್ಟ ಘಟನೆ ವರದಿಯಾಗಿದೆ. ನಲ್ಗಂಜ್ ನಿವಾಸಿ ರವೀಂದ್ರ ಅಹಿರ್ವಾರ್ ಎಂಬುವವರು ಸೌಹಾರ್ದ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಅಸ್ವಸ್ಥರಾಗಿ ಕುಸಿದು ಬಿದ್ದರು. ನೀರು ಕುಡಿತ ಕ್ಷಣ ವಾಂತಿ ಮಾಡಿಕೊಂಡು ಪ್ರಜ್ಞೆ ಕಳೆದುಕೊಂಡರು ಎನ್ನಲಾಗಿದೆ.

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಸರ್ಕಾರಿ ಅಂತರ ಕಾಲೇಜು ಮೈದಾನದಲ್ಲಿ ಈ ಘಟನೆ ಸಂಭವಿಸಿದ್ದು, ರವೀಂದ್ರ ಅವರು ಹಲವು ವಾರಗಳ ಬಳಿಕ ಆಡಲು ತೆರಳಿದ್ದರು. ಸಹ ಆಟಗಾರರು ತಕ್ಷಣ ರವೀಂದ್ರ ಅವರನ್ನು ಮಹರ್‌ಗಂಜ್ ಲಕ್ಷ್ಮಿ ಬಾಯಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ.

error: Content is protected !!