ತಕ್ಷಣದ ನಿರ್ಣಯ ಮತ್ತು ತುರ್ತು ಶಸ್ತ್ರಚಿಕಿತ್ಸೆಯಿಂದ 16 ವರ್ಷದ ಬಾಲಕನ ಪ್ರಾಣ ಉಳಿಸಿದ ಮೆಡಿಕವರ್ ವೈದ್ಯರು

ಬೆಂಗಳೂರು : 16 ವರ್ಷದ ಹುಡುಗನಿಗೆ ನಿಗೆ ಹೊಟ್ಟೆನೋವು ಮತ್ತು ವಾಂತಿಯಿಂದ ನರಳುತ್ತಿದ್ದಕ್ಕೆ ಮೆಡಿಕವರ್ ಆಸ್ಪತ್ರೆಗೆ ದಾಖಲಾಗಿತ್ತು. ಹೊಟ್ಟೆ ಊದಿಕೊಂಡಿದ್ದ ಕಾರಣ ತಕ್ಷಣ ಮಾಡಲಾದ ಸಿಟಿ ಸ್ಕ್ಯಾನ್‌ನಲ್ಲಿ ಆತನಿಗೆ ಒಂದು ಅಪರೂಪದ ಖಾಯಿಲೆ ಇರೋದು ಪತ್ತೆಯಾಯಿತು.

ಸಾಮಾನ್ಯವಾಗಿ ಮಗು ಗರ್ಭಾವಸ್ಥೆಯಲ್ಲಿರುವ ಕರುಳುಗಳು ಸರಿಯಾದ ಹಂತದಲ್ಲಿ ತಿರುಗುತ್ತವೆ. ಆದರೆ ಈ ಹುಡುಗನ ತನ್ನ ತಾಯಿ ಗರ್ಭದಲ್ಲಿರುವಾಗ ತಪ್ಪಾದ ಪ್ರಮಾಣದಲ್ಲಿಕರುಳುಗಳು ತಿರುಗಿದ ಕಾರಣ ಅಸಾಮಾನ್ಯವಾಗಿ ಬೆಳವಣಿಗೆಯಾಗಿದ್ದಾರೆ . ಇಂತಹ ಪ್ರಕರಣಗಳು ಸಾಮಾನ್ಯವಾಗಿ ಸಣ್ಣ ಮಕ್ಕಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಆದರೆ 14 ವರ್ಷಕ್ಕೂ ಹೆಚ್ಚಿನವರಿಗೆ ಕಾಣಿಸಿಕೊಳ್ಳುವುದು ಬಹಳ ಅಪರೂಪ.

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಡಾ. ವಂಶಿ ಕೃಷ್ಣ, ಜನರಲ್ ಸರ್ಜನ್, ಮೆಡಿಕವರ್ ಆಸ್ಪತ್ರೆ ವೈಟ್‌ಫೀಲ್ಡ್, ತಕ್ಷಣ ಎಕ್ಸ್‌ಪ್ಲೋರೇಟರಿ ಲ್ಯಾಪರೋಟಮಿ ವಿತ್ ಲ್ಯಾಡ್ಸ್ ಪ್ರೊಸೀಜರ್ ಶಸ್ತ್ರಚಿಕಿತ್ಸೆ ಮಾಡಿ ಕರುಳಿಮ ಅಂತರದಲ್ಲಿದ್ದ ಅಸಾಮಾನ್ಯ ತಿರುಗಾಟವನ್ನು ಸರಿಪಡಿಸಿದರು.

“ಈ ಕೇಸ್ ಬಹಳ ಅಪರೂಪದದು. ಮಿಡ್‌ಗಟ್ ಮ್ಯಾಲರೋಟೇಶನ್ ಸಾಮಾನ್ಯವಾಗಿ ಶಿಶುಗಳಲ್ಲಿ ಕಂಡುಬರುತ್ತದೆ. ಈ ಪ್ರಕರಣದಲ್ಲಿ ಅದು 16ನೇ ವಯಸ್ಸಿನಲ್ಲಿ ಕಾಣಿಸಿಕೊಂಡಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದೇ ಇದ್ದರೆ ಅಂತರಗಳು ಗ್ರಾಂಗ್ರೈನ್ ಆಗಿ ಪ್ರಾಣಾಪಾಯ ಉಂಟಾಗುತ್ತಿತ್ತು. ತಕ್ಷಣದ ನಿರ್ಣಯ ಮತ್ತು ಶಸ್ತ್ರಚಿಕಿತ್ಸೆಯಿಂದ ರೋಗಿಯ ಜೀವ ಉಳಿಯಿತು,” ಎಂದು ಡಾ. ವಂಶಿ ಕೃಷ್ಣ ಹೇಳಿದರು.

error: Content is protected !!