ಉಪ್ಪಿನಂಗಡಿ: ಹೋಟೆಲೊಂದರ ಕಾರ್ಮಿಕ ಮೊದಲ ಮಹಡಿಯ ಕಾರಿಡಾರ್‌ನಿಂದ ಆಯತಪ್ಪಿ ಪಕ್ಕದಲ್ಲಿ ಹರಿಯುವ ಚರಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ.

ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಬನಾರಿ ಮನೆ ನಿವಾಸಿ ಗಣೇಶ್ ನಾಯ್ಕ (60) ಮೃತ ವ್ಯಕ್ತಿ.

ಇವರು ಉಪ್ಪಿನಂಗಡಿಯ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಟೇಲೊಂದರಲ್ಲಿ ಕಾರ್ಮಿಕರಾಗಿದ್ದು, ಮಂಗಳವಾರ ನಸುಕಿನ ವೇಳೆ ಎದ್ದು ಕಾರಿಡಾರ್ ಬಳಿ ಬಂದಾಗ ಅಯತಪ್ಪಿ ಕೆಳಗಿನ ಚರಂಡಿಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.