ಮಾಣಿ: ಮಾಣಿ ಸಮೀಪದ ಕೊಡಾಜೆಯಲ್ಲಿ ಓಮ್ನಿ ಕಾರು ಪಲ್ಟಿಯಾಗಿ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆ.

ಕುಶಾಲನಗರ ಮೂಲದ ಕುಟುಂಬವಿದ್ದ ಓಮ್ನಿ ಕಾರು ಮಂಗಳೂರಿನಿಂದ ಬರುತ್ತಿದ್ದ ವೇಳೆ ಕೊಡಾಜೆಯಲ್ಲಿ ವೀಲ್ ತುಂಡಾಗಿ ರಸ್ತೆ ಸಮೀಪದ ಹೊಂಡಕ್ಕೆ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಐವರು ಪ್ರಯಾಣಿಕರಲ್ಲಿ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಗಂಭೀರ ಗಾಯವಾಗಿದೆ. ಇತರರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದಿಂದಾಗಿ ಕಾರು ಜಖಂಗೊಂಡಿದ್ದು, ಕಾರಿನೊಳಗೆ ಸಿಲುಕಿದವರನ್ನು ಸ್ಥಳೀಯ ಯುವಕರ ಸಹಾಯದಿಂದ ಹೊರತೆಗೆಯಲಾಯಿತು. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.