ಮಂಗಳೂರು: ಬಾಲಿವುಡ್‌ನ ಪ್ರಸಿದ್ಧ ಹೇರ್ ಡಿಸೈನರ್ ಡಾ.ಶಿವರಾಮ ಕೆ.ಭಂಡಾರಿ ಆಡಳಿತ್ವದ ಶಿವಾ’ಸ್ ಹೇರ್ ಡಿಸೈನರ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಶಿವಾ’ಸ್ ಸಿಗ್ನೇಚರ್ ಫ್ಯಾಮಿಲಿ ಸಲೂನ್‌ನ 26ನೇ ಹಾಗೂ ಮಂಗಳೂರು ನಗರದಲ್ಲಿನ ದ್ವಿತೀಯ ಶಾಖೆ ಉದ್ಘಾಟನೆ ಸಮಾರಂಭ ನಡೆಯಿತು.


ಶಿವಾ’ಸ್ ಹೇರ್ ಡಿಸೈನರ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಶಿವಾ’ಸ್ ಸಿಗ್ನೇಚರ್ ಫ್ಯಾಮಿಲಿ ಸಲೂನ್ ನ್ನು ಅಂತರಾಷ್ಟ್ರೀಯ ಪ್ರಸಿದ್ಧ ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕ-ನಿರ್ದೇಶಕ ಪದ್ಮಶ್ರೀ ಡಾ. ಮಧುರ್ ಭಂಡಾರ್ಕರ್ ಮತ್ತು ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್ ಪುರಸ್ಕೃತ ಬಾಲಿವುಡ್ ಅಭಿನೇತ್ರಿ ಆಯೀಷಾ ಎಸ್.ಐಮನ್ ಉದ್ಘಾಟಿಸಿದರು.

ಪದ್ಮಶ್ರೀ ಡಾ. ಮಧುರ್ ಭಂಡಾರ್ಕರ್ ಮಾತನಾಡಿ ಬದುಕಿನುದ್ದದ ಅವಿರತ ಶ್ರಮ, ಒದ್ದಾಟವು ಶಿವರಾಮ ಅವರ ಆರಾಧ್ಯ ಕುಲವೃತ್ತಿಗೆ ಸಾಥ್ ನೀಡಿದ್ದು, ಇವೆಲ್ಲವುಗಳ ಫಲಿತಾಂಶ ಶಿವಾ’ಸ್ ಸಲೂನ್‌ಗಳ ಉಗಮ, ವಿಸ್ತಾರತ್ವವಾಗಿದೆ. ನಾವು ವಿಶ್ವವಿಡೀ ಸಾಧನೆ ಸಿದ್ಧಿಸಿದರೂ ತವರೂರಲ್ಲಿ ಕನಿಷ್ಠ ಮಟ್ಟದ ಉದ್ಯಮ ನಡೆಸಿದಾಗ ಮಾತ್ರ ನಮ್ಮೂರ ಸಾಧಕರೆಣಿಸಲು ಸಾಧ್ಯವಾಗುವುದು. ಕ್ಷೌರ್ಯವೃತ್ತಿ ಮೂಲಕ ಮುಂಬಯಿ, ಮಂಗಳೂರು ಮಹಾನಗರಗಳಲ್ಲಿ ಹೆಸರುವಾಸಿಯಾದ ಶಿವಾಸ್ ಭವಿಷ್ಯದಲ್ಲಿ ಕರ್ನಾಟಕದಾದ್ಯಂತ ಶಾಖೆಗಳನ್ನು ಪಸರಿಸಿ ಇಡೀ ರಾಷ್ಟ್ರಕ್ಕೆ ಪ್ರಸಿದ್ಧಿ ಪಡೆಯುವಂತಾಗಲಿ ಎಂದು ಹೇಳಿದರು.

ಶಿವಾ’ಸ್ ಹೇರ್ ಡಿಸೈನರ್‌ಸ್ ಪ್ರೈವೇಟ್ ಲಿಮಿಟೆಡ್ ಅಡಳಿತ ನಿರ್ದೇಶಕ ಡಾ.ಶಿವರಾಮ ಕೆ.ಭಂಡಾರಿ ಮಾತನಾಡಿ ಪರಿಶುದ್ಧ ಮನಸ್ಸುಗಳ ಬೆಸುಗೆ ಪರಸ್ಪರ ಉದ್ಯಮಶೀಲತೆ ಜೊತೆಗೆ ಸಾಧನಾಶೀಲರನ್ನಾಗಿಸುತ್ತದೆ. ಬಾಲ್ಯದಲ್ಲೇ ವೃತ್ತಿನಿಷ್ಠೆಯನ್ನು ರೂಢಿಸಿಕೊಂಡ ನನ್ನನ್ನು ಇಂದು ಕುಲವೃತ್ತಿಯೇ ಸಾಧಕರನ್ನಾಗಿಸಿದೆ ಎಂದು ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿದರು.

ಅಶೋಕ್ ಮುನ್ಸಿ ನ್ಯಾಯವಾದಿ ಪದ್ಮರಾಜ್ ಆರ್.ಪೂಜಾರಿ, ಎ.ಜೆ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಕೆ.ಪ್ರಸಂತ್ ಮಾರ್ಲಾ, ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಸಂಸ್ಥೆಯ ಸಿಇಒ ಡಾ. ವಿನೋದ್ ಚೋಫ್ರ್ರಾ, ಉದ್ಯಮಿ ಎಂ.ವಿ ಸತೀಶನ್, ನಿತ್ಯಾನಂದ ಭಂಡಾರಿ ತಲಪಾಡಿ, ಕೆ.ಹಿರೇಮಠ್, ನಕುಲ್ ಪೂಜಾರಿ ಗುಲ್ಬರ್ಗ, ಯತಿಕ್ ರಾಜ್, ಎಸ್.ಸಾಧನಾ, ಪ್ರಾಚಾರ್ಯ ವಿಠಲ ಅಬುರ, ಅನುಶ್ರೀ ಶಿವರಾಮ್ , ಕು. ಆರಾಧ್ಯ ಎಸ್.ಭಂಡಾರಿ, ಅರ್‍ಕಿಟೆಕ್ಟ್ ದೀಪಕ ಬಾಳಿಗ, ವಿನಯಕುಮಾರ್ ಬಗಂಬಿಲ, ಶಿವಾ’ಸ್ ಪರಿವಾರದ ರಾಘವ ವಿ.ಭಂಡಾರಿ, ಶ್ವೇತಾ ಆರ್.ಭಂಡಾರಿ, ರವಿ ಭಂಡಾರಿ, ಮೊಹ್ಮದ್ ಇಸಾಕ್, ಸುದರ್ಶನ್ ಭಂಡಾರಿ, ಸಿಂಚನ ಭಂಡಾರಿ ಉಪಸ್ಥಿತರಿದ್ದರು.


ಸಂಸ್ಥೆಯ ಸಿಇಒ ಡಾ. ವಿನೋದ್ ಚೋಫ್ರ್ರಾ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿ.ಜೆ ಡಿಕ್ಸನ್ ಕಾರ್ಯಕ್ರಮ ನಿರೂಪಿಸಿದರು. ಸೋಮಶೇಖರ್ ಭಂಡಾರಿ ವಂದಿಸಿದರು.