ಕೆನಡಾದಲ್ಲಿ ಅಬ್ಬರಿಸಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್: ಭಾರತ ಮೂಲದ ಬಿಸ್‌ನೆನ್ ಮ್ಯಾನ್‌ ಹತ್ಯೆ: ಪಂಜಾಬಿ ಗಾಯಕನ ಮನೆ ಮೇಲೆ ಶೂಟೌಟ್

ನವದೆಹಲಿ: ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತನ್ನ ಅಪರಾಧ ಚಟುವಟಿಕೆಗಳನ್ನು ಕೆನಡಾದಲ್ಲಿಯೂ ಮುಂದುವರೆಸಿದೆ. ಸೋಮವಾರ, ಈ ಗ್ಯಾಂಗ್ ಭಾರತೀಯ ಮೂಲದ ಕೈಗಾರಿಕೋದ್ಯಮಿ ದರ್ಶನ್ ಸಿಂಗ್ ಸಹಾಸಿ ಅವರ ಹತ್ಯೆ ಮತ್ತು ಪಂಜಾಬಿ ಗಾಯಕ ಚನ್ನಿ ನಟ್ಟನ್ ಅವರ ಮನೆಯ ಮೇಲೆ ನಡೆದ ಗುಂಡಿನ ದಾಳಿಯ ಹೊಣೆ ಹೊತ್ತುಕೊಂಡಿದೆ.

ಬಿಷ್ಣೋಯ್ , ದರ್ಶನ್ ಸಿಂಗ್ ಸಹಸಿ ಹಾಗೂ ಚನ್ನಿ ನಟ್ಟನ್

ಈ ಘಟನೆಗಳು, ಅಮೆರಿಕಾದಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯ ಜಗದೀಪ್ ಸಿಂಗ್ ಅಲಿಯಾಸ್ ಜಗ್ಗಾನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ ಒಂದು ದಿನದೊಳಗೆ ನಡೆದಿರುವುದು ಗಮನಾರ್ಹವಾಗಿದೆ.

ಕೈಗಾರಿಕೋದ್ಯಮಿ ದರ್ಶನ್ ಸಿಂಗ್ ಸಹಾಸಿ ಹತ್ಯೆ
ಗ್ಯಾಂಗ್ ಸದಸ್ಯ ಗೋಲ್ಡಿ ಧಿಲ್ಲನ್ ಸಾಮಾಜಿಕ ಜಾಲತಾಣದ ಮೂಲಕ ಈ ಹತ್ಯೆ ಬಿಷ್ಣೋಯ್ ಗ್ಯಾಂಗ್‌ ಕೃತ್ಯ ಎಂದು ಘೋಷಿಸಿದ್ದಾನೆ. ಅವನ ಪ್ರಕಾರ, 68 ವರ್ಷದ ದರ್ಶನ್ ಸಿಂಗ್ ಸಹಾಸಿ ದೊಡ್ಡ ಮಾದಕ ವಸ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು, ಗ್ಯಾಂಗ್ ಅವರಲ್ಲಿ ಹಣಕ್ಕೆ ಬೇಡಿಕೆ ಇಟ್ಟಿತ್ತು. ಹಣ ನೀಡದ ಕಾರಣ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆಂದು ಗ್ಯಾಂಗ್ ಹೇಳಿಕೊಂಡಿದೆ.

ವರದಿಗಳ ಪ್ರಕಾರ, ಅಬಾಟ್ಸ್‌ಫೋರ್ಡ್ (ಬ್ರಿಟಿಷ್ ಕೊಲಂಬಿಯಾ)ನಲ್ಲಿ ಸೋಮವಾರ ಬೆಳಿಗ್ಗೆ ತಮ್ಮ ಮನೆಯಿಂದ ಹೊರಬಂದ ಸಹಾಸಿ ಅವರನ್ನು, ಮನೆಯ ಬಾಗಿಲಿನ ಎದುರು ನಿಂತಿದ್ದ ಶೂಟರ್ ಗುಂಡಿಕ್ಕಿ ಕೊಂದಿದ್ದಾನೆ. ಪ್ರಾಥಮಿಕ ತನಿಖೆಯ ಪ್ರಕಾರ, ಶೂಟರ್ ಸಹಾಸಿ ತಮ್ಮ ಕಾರಿನತ್ತ ಬರುವವರೆಗೆ ಕಾಯುತ್ತಿದ್ದ. ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲೇ ಸಹಾಸಿ ಗಂಭೀರವಾಗಿ ಗಾಯಗೊಂಡಿದ್ದರು. ಮುನ್ನೆಚ್ಚರಿಕೆಯಾಗಿ ಸಮೀಪದ ಮೂರು ಶಾಲೆಗಳನ್ನು ಲಾಕ್‌ಡೌನ್ ಮಾಡಲಾಯಿತು.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

ಸಹಾಸಿಯ ಹಿನ್ನೆಲೆ:
ಸಹಾಸಿ 1991ರಲ್ಲಿ ಕೆನಡಾಕ್ಕೆ ವಲಸೆ ಬಂದಿದ್ದರು. ಅವರು ಪ್ರಸಿದ್ಧ ಕೆನಮ್ ಇಂಟರ್‌ನ್ಯಾಷನಲ್ ಎಂಬ ಜವಳಿ ಮರುಬಳಕೆ ಕಂಪೆನಿಯ ಅಧ್ಯಕ್ಷರಾಗಿದ್ದರು. ಸಣ್ಣ ಉದ್ಯೋಗಗಳಿಂದ ಆರಂಭಿಸಿ, ಅವರು ಕಂಪನಿಯನ್ನು ಜಾಗತಿಕ ಮಟ್ಟಕ್ಕೆ ಏರಿಸಿದ್ದರು. ಕೈಗಾರಿಕೋದ್ಯಮಿ ಮಾತ್ರವಲ್ಲದೆ, ಅವರು ಸಮಾಜಸೇವಕನಾಗಿಯೂ ಹೆಸರುವಾಸಿಯಾಗಿದ್ದರು. ಅವರ ಸಾವು ಕೆನಡಾದ ಪಂಜಾಬಿ ಸಮುದಾಯದಲ್ಲಿ ಆಘಾತ ಮತ್ತು ಆಕ್ರೋಶ ಉಂಟುಮಾಡಿದೆ.

ಪಂಜಾಬಿ ಗಾಯಕನ ಮನೆಯಲ್ಲಿ ಗುಂಡಿನ ದಾಳಿ
ಬಿಷ್ಣೋಯ್ ಗ್ಯಾಂಗ್‌ನ ಮತ್ತೊಂದು ಕೃತ್ಯವೆಂದರೆ ಪಂಜಾಬಿ ಗಾಯಕ ಚನ್ನಿ ನಟ್ಟನ್ ಅವರ ಮನೆಯಲ್ಲಿ ನಡೆದ ಗುಂಡಿನ ದಾಳಿ. ಗ್ಯಾಂಗ್ ಸದಸ್ಯ ಧಿಲ್ಲನ್, ಸಾಮಾಜಿಕ ಜಾಲತಾಣದ ಮೂಲಕ ಈ ದಾಳಿಯು ಗಾಯಕ ಸರ್ದಾರ್ ಖೇರಾ ಅವರನ್ನು ನಟ್ಟನ್ ಕರೆಯುವ ವೇಳೆಗೆ ನಡೆದಿತ್ತಂತೆ ಎಂದು ತಿಳಿಸಿದ್ದಾನೆ. ಧಿಲ್ಲನ್, “ನಟ್ಟನ್ ಜೊತೆ ನಮ್ಮ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಆದರೆ ಸರ್ದಾರ್ ಖೇರಾ ಅವರೊಂದಿಗೆ ಕೆಲಸ ಮಾಡುವ ಯಾರೇ ಇರಲಿ, ಅವರ ನಷ್ಟಕ್ಕೆ ತಾವೇ ಜವಾಬ್ದಾರರು,” ಎಂದು ಎಚ್ಚರಿಕೆ ನೀಡಿದ್ದಾನೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಯಾರು?
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ಕೆನಡಾ ಸರ್ಕಾರವು ಭಯೋತ್ಪಾದಕ ಸಂಘಟನೆಯಾಗಿ ಪಟ್ಟಿ ಮಾಡಿದೆ. ಈ ಗ್ಯಾಂಗ್ ವಿಶ್ವದಾದ್ಯಂತ 700 ಕ್ಕೂ ಹೆಚ್ಚು ಶೂಟರ್‌ಗಳ ಸಂಪರ್ಕ ಜಾಲವನ್ನು ಹೊಂದಿದೆ. ಸಿಧು ಮೂಸೆವಾಲಾ ಹತ್ಯೆ, ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ನೀಡಿದ ಬೆದರಿಕೆ, ಹಾಗೂ ಖಲಿಸ್ತಾನ ಪರ ಚಟುವಟಿಕೆಗಳ ಜೊತೆಗಿನ ನಂಟು — ಇವುಗಳಲ್ಲಿ ಈ ಗ್ಯಾಂಗ್‌ ಗುರುತಿಸಿಕೊಂಡಿದೆ.

error: Content is protected !!