ಆಸ್ಪತ್ರೆ ಸಮೀಪ ನಿಲ್ಲಿಸಿದ್ದ ಬೈಕ್ ಕಳವು: ಪ್ರಕರಣ ದಾಖಲು

ಮಂಗಳೂರು: ಫಳ್ನೀರ್ ರಸ್ತೆಯಲ್ಲಿರುವ ಆಸ್ಪತ್ರೆಯ ಸಮೀಪ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಸಂಗತಿ ಬೆಳಕಿಗೆ ಬಂದಿದ್ದು, ಪ್ರದೀಪ್ ಆಚಾರ್ಯ ಅವರು ಕದ್ರಿ ಠಾಣೆ ಪೊಲೀಸರಿಗೆ ಈ ಸಂಬಂಧಿ ದೂರು ನೀಡಿದ್ದಾರೆ.

ಪ್ರದೀಪ್ ಆಚಾರ್ಯ ರಾತ್ರಿ 7.10ಕ್ಕೆ ತಮ್ಮ ಬೈಕನ್ನು ಆಸ್ಪತ್ರೆ ಸಮೀಪ ನಿಲ್ಲಿಸಿ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮ್ಮ ಚಿಕ್ಕಪ್ಪನನ್ನು ನೋಡಲು ಹೋಗಿದ್ದರು. ಸುಮಾರು 9 ಗಂಟೆಗೆ ಅವರು ಹಿಂತಿರುಗಿ ಬಂದಾಗ, ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ.

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಈ ವೇಳೆ ಪ್ರದೀಪ್ ಆಚಾರ್ಯ ಸುತ್ತಮುತ್ತಲ ಪ್ರದೇಶಗಳಲ್ಲಿ ಬೈಕ್ ಹುಡುಕಿದರೂ, ಅದು ಪತ್ತೆಯಾಗಿಲ್ಲ. ಕಳವುಗೊಂಡ ಬೈಕಿನ ಮೌಲ್ಯ ಸುಮಾರು 45,000 ರೂಪಾಯಿ ಇದೆಯೆಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕದ್ರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

error: Content is protected !!