ಮೂಲ್ಕಿ: ಕಾರ್ ಚಾಲಾಕಿಯ ಅಜಾಗರೂಕತೆಯ ಚಾಲನೆ, ಬೈಕ್ ಸವಾರ ಗಂಭೀರ

ಮೂಲ್ಕಿ: ಹೆದ್ದಾರಿಯಲ್ಲಿ ಮೂಲ್ಕಿ ಕಡೆಯಿಂದ ಬರುತ್ತಿದ್ದ ಕಾರ್ ಚಾಲಕಿ ಕಾರ್ನಾಡ್ ಬೈಪಾಸ್ ಬಳಿ ಏಕಾಏಕಿ ಬಲಕ್ಕೆ ತಿರುವು ಪಡೆದ ವೇಳೆ ಬದಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಯುವಕ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ರಾತ್ರಿ 7 ಗಂಟೆಯ ಸುಮಾರಿಗೆ ಸಂಭವಿಸಿದೆ.


ಮೂಲ್ಕಿ ನಿವಾಸಿ ಭಾನು ಎಂಬವರು ಕಾರ್ ಚಲಾಯಿಸುತ್ತಿದ್ದ ಮಹಿಳೆ. KA 66 H 9596 ನಂಬರಿನ ಬೈಕ್ ಸವಾರನನ್ನು ಕೆಲವು ಮೀಟರ್ ದೂರ ಎಳೆದುಕೊಂಡು ಹೋಗಿದ್ದು ಯುವಕ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದಾನೆ. ಘಟನೆಯಿಂದಾಗಿ ಕೆಲಹೊತ್ತು ಸ್ಥಳದಲ್ಲಿ ರಸ್ತೆ ಬ್ಲಾಕ್ ಉಂಟಾಗಿತ್ತು. ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

error: Content is protected !!