ಉಳ್ಳಾಲ: ಮಲತಂದೆಯೇ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯ ವಿರುದ್ಧ ಉಳ್ಳಾಲ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಮಾಸ್ತಿಕಟ್ಟೆ ನಿವಾಸಿ ಅಮೀರ್(40) ಬಂಧಿತ ಆರೋಪಿ.
ಬಾಲಕಿಯ ಮೇಲೆ ಆರೋಪಿ ಏಳು ವರ್ಷದವಳಿದ್ದಾಗ ಅತ್ಯಾಚಾರ ಎಸಗಲು ಆರಂಭಿಸಿದ್ದು, ಇದೀಗ 12 ರ ಹರೆಯದವಳಾಗಿದ್ದು ನಿರಂತರ ಅತ್ಯಾಚಾರ ಎಸಗುತ್ತಲೇ ಬಂದಿದ್ದನು. ಮನೆ ಮಂದಿ ಮರ್ಯಾದಗೆ ಹೆದರಿ ದೂರು ದಾಕಲಿಸದೆ ಇದ್ದು ,ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಾನಸಿಕವಾಗಿ ನೊಂದಿದ್ದ ಬಾಲಕಿಯನ್ನು ಹೆತ್ತವರು ನ.18 ರಂದು ಆಸ್ಪತ್ರೆಗೆ ಕೊಂಡೊಯ್ದಾಗ ಪ್ರಕರಣ ಬೆಳಕಿಗೆ ಬಂದಿದೆ .