ಹಾವೇರಿ: ವರದಾಹಳ್ಳಿ ಗ್ರಾಮದಲ್ಲಿ ಮಗಳ ಜೊತೆ ತಾಯಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ(ಅ.19) ಮಧ್ಯಾಹ್ನ ಸುಮಾರು 3 ಗಂಟೆಗೆ ನಡೆದಿದೆ.
ಸವಿತಾ ನಾಗರಾಜ್ ಉಳ್ಳಾಗಡ್ಡಿ (38 ವರ್ಷ) ಹಾಗೂ ಕಾವ್ಯಾ (12 ವರ್ಷ) ಮೃತರು.
ಗಂಡನ ಮನೆಯಲ್ಲಿ ದಿನನಿತ್ಯ ನಡೆಯುತ್ತಿದ್ದ ಕಲಹದಿಂದ ಮನನೊಂದು ಸವಿತಾ ಅವರು ಮಗಳ ಸಮೇತ ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ರಿ ಕಾವ್ಯಾ ಅವರ ಮೃತದೇಹ ಈಗಾಗಲೇ ಸಿಕ್ಕಿದ್ದು, ಆದರೆ ತಾಯಿ ಸವಿತಾ ಮೃತದೇಹಕ್ಕಾಗಿ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ. ಬೋಟ್ ಮೂಲಕ ಕಳೆದೆರಡು ತಾಸುಗಳಿಂದ ವರದಾ ನದಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.