ಸುರತ್ಕಲ್ : ಭಾರೀ ಗಾಳಿ ಮಳೆಗೆ ಮನೆಯ ಮೇಲೆ ತೆಂಗಿನ ಮರ ಕುಸಿದು ಬಿದ್ದು ಮೇಲ್ಚಾವಣಿ ಎರಡು ಹೋಳಾದ ಘಟನೆ ಘಟನೆ ಸುರತ್ಕಲ್ ಸಮೀಪದ ಕುಚಿ ಗುಡ್ಡೆಯಲ್ಲಿ ಶುಕ್ರವಾರ(ಅ.17) ರಾತ್ರಿ ನಡೆದಿದೆ.
ಸುರತ್ಕಲ್ ನಿವಾಸಿ ಯಶೋಧ ಅವರ ಮನೆಯ ಮೇಲ್ಛಾವಣಿಯು ಸಂಪೂರ್ಣ ಹಾನಿಗೊಂಡಿದೆ. ಈ ಘಟನೆಯ ಸಮಯದಲ್ಲಿ ಮನೆಯಲ್ಲಿದ್ದ ಯಶೋಧ ಮತ್ತು ಅವರ ಪುತ್ರಿ ಸ್ಪೂರ್ತಿತೆಂಗಿನ ಮರ ಬಿದ್ದ ಶಬ್ದ ಕೇಳಿ ಮನೆಯಿಂದ ಹೊರಗೆ ಓಡಿಬಂದು ತಮ್ಮ ಜೀವ ರಕ್ಷಿಸಿಕೊಂಡಿದ್ದಾರೆ.
ಮಂಗಳೂರು ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ ಇಂದು(ಅ.18) ಹಾನಿಗೀಡಾದ ಮನೆಗೆ ಭೇಟಿ ನೀಡಿ, ಪ್ರಕೃತಿ ವಿಕೋಪದಿಂದ ಹಾನಿಗೊಂಡ ಮನೆಯ ಪುನರ್ ನಿರ್ಮಾಣಕ್ಕೆ ಅಗತ್ಯವಾದ ಪರಿಹಾರ ಒದಗಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂದರ್ಭ ನಿಕಟಪೂರ್ವ ಪಾಲಿಕೆಯ ಸದಸ್ಯೆ ನಯನ ಆರ್ ಕೋಟ್ಯಾ ನ್, ರಾಘವೇಂದ್ರ ಶೆಣೈ ಮತ್ತಿತರರು ಉಪಸ್ಥಿತರಿದ್ದರು.