ಶಬರಿಮಲೆ: ತುಳಮಾಸ ಪೂಜೆಗಳ ಅಂಗವಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಇಂದು ಭಕ್ತರಿಗೆ ತೆರೆದಿದೆ. ಪಟಣಾಂತಿಟ್ಟದಲ್ಲಿರುವ ಶಬರಿಮಲೆ ಪರ್ವತ ಮಂದಿರದಲ್ಲಿ ಪೂಜೆ ಕಾರ್ಯಗಳು ಆರಂಭಗೊಂಡಿವೆ.
ಇಂದಿನಿಂದ ಅಕ್ಟೋಬರ್ 22ರವರೆಗೆ ದೇವಾಲಯ ಭಕ್ತರಿಗೆ ತೆರೆಯಲಾಗಿದ್ದು, ಈ ಅವಧಿಯಲ್ಲಿ ಸಾವಿರಾರು ಭಕ್ತರ ಆಗಮನ ನಿರೀಕ್ಷೆಯಿದೆ.
ಮುಂದಿನ ವಾರ ಅಕ್ಟೋಬರ್ 22ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಭೇಟಿ ನೀಡಲಿದ್ದು, ಆ ಸಂದರ್ಭಕ್ಕೆ ಸಂಬಂಧಿಸಿದ ಸಿದ್ಧತೆಗಳು ಹಾಗೂ ಭದ್ರತಾ ಕ್ರಮಗಳು ತೀವ್ರಗತಿಯಲ್ಲಿ ನಡೆಯುತ್ತಿವೆ.