ಸಿಲ್ವರ್‌ ಜುಬಿಲಿ ಸಂಭ್ರಮದಲ್ಲಿರುವ ಪೇಸ್‌ ಎಜುಕೇಶನ್‌ ಗ್ರೂಪ್‌ನಿಂದ ‘ಪೇಸ್ ಸಿಲ್ವಿಯೋರಾ 2025’ ಉತ್ಸವ ಆರಂಭ

ಮಂಗಳೂರು: ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವಹಿಸಿ 25 ವರ್ಷಗಳನ್ನು ಪೂರೈಸಿದ ಪೇಸ್ ಎಜುಕೇಶನ್ ಗ್ರೂಪ್ ತನ್ನ ಸಿಲ್ವರ್‌ ಜುಬಿಲಿ ಸಂಭ್ರಮದ ಅಂಗವಾಗಿ ‘ಪೇಸ್ ಸಿಲ್ವಿಯೋರಾ 2025’ ಉತ್ಸವವನ್ನು ಘೋಷಿಸಿದೆ. “ಒಂದು ಪರಂಪರೆಯನ್ನು ಗೌರವಿಸುವುದು, ಭವಿಷ್ಯವನ್ನು ಬೆಳಗಿಸುವುದು” ಎಂಬ ಥೀಮ್‌ನಡಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಮೂರು ತಿಂಗಳ ಕಾಲ ಉತ್ಸವ ಜರುಗಲಿದ್ದು, ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ, ಸಾಮಾಜಿಕ ಹಾಗೂ ಕ್ರೀಡಾ ಚಟುವಟಿಕೆಗಳು ಆಯೋಜನೆಯಾಗಲಿವೆ. ಅಂತಿಮ ಹಂತದ ಸಮಾರಂಭ ಡಿಸೆಂಬರ್‌ ಕೊನೆಯಲ್ಲಿ ಮಂಗಳೂರಿನ ಪೇಸ್ ನೊಲೆಡ್ಜ್ ಸಿಟಿ ಕ್ಯಾಂಪಸ್‌ನಲ್ಲಿ ನಡೆಯಲಿದ್ದು, ಗ್ರಾಂಡ್‌ ಫೈನಲ್‌ ಜನವರಿ 24, 2026ರಂದು ದುಬೈನಲ್ಲಿ ಜರುಗಲಿದೆ ಎಂದು ಪಿ.ಎ. ಎಜುಕೇಶನಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶರಫುದ್ದೀನ್ ಪಿ.ಕೆ. ತಿಳಿಸಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2000ರಲ್ಲಿ ಮಂಗಳೂರಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿನಿಂದ ಆರಂಭಗೊಂಡ ಪೇಸ್ ಸಂಸ್ಥೆ ಇಂದು ಯುಎಇ, ಭಾರತ ಹಾಗೂ ಕುವೈತ್‌ ಸೇರಿದಂತೆ ಹಲವು ದೇಶಗಳಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಘಟಕಗಳ ಜಾಲವಾಗಿ ಬೆಳೆಯುತ್ತಿದೆ ಎಂದರು. ಅಕ್ಟೋಬರ್‌ 14ರಂದು ಪೇಸ್ ನೊಲೆಡ್ಜ್ ಸಿಟಿ ಕ್ಯಾಂಪಸ್‌ನಲ್ಲಿ ‘ಪೇಸ್ ಸಿಲ್ವಿಯೋರಾ 2025’ ಬ್ಯಾನರ್‌ ಡ್ರಾಪ್ ಸಮಾರಂಭ ಹಾಗೂ ಉತ್ಸವದ ಉದ್ಘಾಟನೆ ನೆರವೇರಿದೆ ಎಂದು ತಿಳಿಸಿದರು.

advertisement

“ಈ ಸಂಭ್ರಮವು ಸಂಸ್ಥೆಯ ಶಿಕ್ಷಣ, ನಾಯಕತ್ವ ಮತ್ತು ಸೇವೆಯ ಶಾಶ್ವತ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಬೋಧಕ ವೃಂದ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ,” ಎಂದು ಶರಫುದ್ದೀನ್ ಪಿ.ಕೆ. ಹೇಳಿದರು.

ಸಂಭ್ರಮದ ಅಂಗವಾಗಿ ಆಹ್ವಾನಿತ ಉಪನ್ಯಾಸ ಸರಣಿ, ವೃತ್ತಿ ಮಾರ್ಗದರ್ಶನ, ಹಣಕಾಸು ಹಾಗೂ ಸೈಬರ್‌ ಜಾಗೃತಿ ಅಭಿಯಾನಗಳು, ಆರೋಗ್ಯ ಹಾಗೂ ರಕ್ತದಾನ ಶಿಬಿರಗಳು, ವೃದ್ಧಾಶ್ರಮ ಭೇಟಿ, ಫಿಟ್ನೆಸ್ ಚಾಲೆಂಜ್‌, ಸಾಂಸ್ಕೃತಿಕ ಸ್ಪರ್ಧೆಗಳು, ಹಳೆಯ ವಿದ್ಯಾರ್ಥಿ ಮಿಲನ ಮುಂತಾದ ಚಟುವಟಿಕೆಗಳು ನಡೆಯಲಿವೆ.

ಸಂಸ್ಥೆಯ ನಿಷ್ಠಾವಂತ ಸಿಬ್ಬಂದಿಗಳಿಗೆ ಸನ್ಮಾನ, ಸ್ಮರಣಿಕೆ ಬಿಡುಗಡೆ ಹಾಗೂ ವಿಶೇಷ ವಿದ್ಯಾರ್ಥಿವೇತನ ಅಭಿಯಾನಗಳೂ ಕಾರ್ಯಕ್ರಮದ ಭಾಗವಾಗಿವೆ.

ಸುದ್ದಿಗೋಷ್ಠಿಯಲ್ಲಿ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ರಾಮೀಸ್ ಎಂ.ಕೆ., ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೇಮುಲ್ಲಾ ಖಾನ್, ಪಿ.ಎ. ಫಸ್ಟ್ ಗ್ರೇಡ್ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫರಾಜ್ ಜೆ. ಹಸೀಂ, ಡೀನ್ ಡಾ. ಸಯ್ಯದ್ ಅಮೀನ್ ಅಹಮ್ಮದ್, ಫಿಸಿಯೋಥೆರಪಿ ಇನ್‌ಸ್ಟಿಟ್ಯೂಟ್‌ನ ಪ್ರಾಂಶುಪಾಲೆ ಡಾ. ಅಫಿಫಾ ಸಲೀಂ ಹಾಗೂ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಖಾನ್ ಉಪಸ್ಥಿತರಿದ್ದರು.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!