ಉಡುಪಿ: ಸಚಿವ ಪ್ರಿಯಾಂಕ ಖರ್ಗೆ ಇನ್ನೊಂದು ಜನ್ಮದಲ್ಲಿ ಹುಟ್ಟಿ ಬಂದರೂ ಆರೆಸ್ಸೆಸ್ ಮೇಲೆ ಕ್ರಮ ತೆಗೆದುಕೊಳ್ಳಲು ಅಥವಾ ನಿಷೇಧಿಸಲು ಸಾಧ್ಯವಿಲ್ಲ. ಮುಸ್ಲಿಮರನ್ನು ಓಲೈಕೆ ಮಾಡುವ ಇಂತಹ ಹೇಳಿಕೆ ನೀಡುವುದನ್ನು ಬಿಟ್ಟು ಕಲಬುರಗಿಯ ಮಸೀದಿಯ ಆಜಾನ್ ನಿಷೇಧ ಮಾಡುವ ಧೈರ್ಯ ತೋರಿಸಿ ಎಂದು ಶಾಸಕ ಯಶ್‌ಪಾಲ್ ಸುವರ್ಣ ಸವಾಲು ಹಾಕಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ನಿಷೇಧ ಮಾಡುವ ಶಕ್ತಿ ಸಾಮರ್ಥಯ ಅವರಿಗೆ ಇಲ್ಲ ಮತ್ತು ಸಾಧ್ಯವೂ ಇಲ್ಲ. ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರ ಮಗ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಆರೆಸ್ಸೆಸ್ ಎಂದರೆ ಅಲರ್ಜಿ. ಅವರ ಹೇಳಿಕೆಗಳು ಕಾಂಗ್ರೆಸ್ ಅವನತಿಗೆ ಕಾರಣವಾಗುತ್ತಿದೆ ಎಂದರು.
ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಸಂಘದ ಕಾರ್ಯಚಟುವಟಿಕೆಯನ್ನು ದೇಶವೇ ಮೆಚ್ಚಿದೆ. ಕಾಂಗ್ರೆಸ್‌ನ ಕೆಲವರಿಗೆ ಆರೆಸ್ಸೆಸ್‌ನ ಭಯವಿದೆ ಎಂದರು.