PFI ಪರ ಪೋಸ್ಟ್‌ ಹಾಕಿ ಆತಂಕ ಸೃಷ್ಟಿಸಿದ ಆರೋಪಿ ಅರೆಸ್ಟ್

ಮಂಗಳೂರು: ವಾಟ್ಸ್ಯಾಪ್‌ ಗ್ರೂಪ್‌ನಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಪರವಾಗಿ ಪೋಸ್ಟ್‌ ಹಂಚಿದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಉರ್ವಸ್ಟೋರಿನಲ್ಲಿ ಬಂಧಿಸಿದ್ದಾರೆ. ಉಪ್ಪಿನಗಂಡಿ ರಾಮಕುಂಜದ ಬೀಜಾತಳಿ ನಿವಾಸಿ ಸೈಯ್ಯದ್ ಇಬ್ರಾಹಿಂ ತಂಙಳ್ (55) ಬಂಧಿತ ಆರೋಪಿ.

ಪೊಲೀಸ್ ವರದಿ ಪ್ರಕಾರ, ಆರೋಪಿ WhatsApp ಗ್ರೂಪ್‌ನಲ್ಲಿ ಕೇಂದ್ರ ಸರಕಾರದಿಂದ ನಿಷೇಧಿತ Popular Front of India (PFI) ಸಂಘಟನೆಯ ಪರವಾಗಿ ಪೋಸ್ಟ್ ಹಂಚಿ, ಸಂಘಟನೆಯ ಬಗ್ಗೆ ಸ್ವಯಂ ಪ್ರೇರಿತ ಪ್ರಚಾರ ನಡೆಸಿ, ಅಪರಾಧ ಬಲ ಪ್ರದರ್ಶನ ಮೂಲಕ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ ಆರೋಪವಿದೆ. ಈ ಪ್ರಕರಣದ ಆಧಾರದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆದಲ್ಲಿ ಅಪರಾಧ ಕ್ರಮಾಂಕ 113/2025 ರಂತೆ U/s 10(a), (i), 13, 18 UAPA Act ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ವಶಪಡಿಸಿಕೊಂಡಾಗ, ಅವನ ಮೊಬೈಲ್ ಫೋನ್ ಅಮಾನತ್ತು ಮಾಡಲಾಗಿದ್ದು, ತನಿಖೆಗೆ ಒಳಪಡಿಸಲಾಗಿದೆ. ಆರೋಪಿ 49ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (CCH-50) ಮತ್ತು ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ, ಬೆಂಗಳೂರುಗೆ ಹಾಜರುಪಡಿಸಲ್ಪಟ್ಟಿದ್ದು, ನ್ಯಾಯಾಲಯವು ಅಕ್ಟೋಬರ್ 24, 2025ರವರೆಗೆ ಅವರನ್ನು ನ್ಯಾಯಾಂಗ ವಶಕ್ಕೆ ನೀಡಿದೆ.

error: Content is protected !!