ಅಲೆಮಾರಿ ಬಾಲಕಿ ರೇ*ಪ್‌ ಆಂಡ್‌ ಮ*ರ್ಡರ್‌ ಆರೋಪಿಯ ಕಾಲಿಗೆ ಗುಂಡು!

ಮೈಸೂರು : ಮೈಸೂರಿನ ದಸರಾದಲ್ಲಿ ಬಲೂನ್‌ ಮಾರಲು ಬಂದಿದ್ದ ಅಲೆಮಾರಿ ಬಾಲಕಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಯ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಸಿದ್ದಲಿಂಗಪುರ ನಿವಾಸ ಆರೋಪಿ ಕಾರ್ತಿಕ್ ಪ್ರಕರಣದ ಆರೋಪಿಯಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕೊಳ್ಳೇಗಾಲದಲ್ಲಿ ಈತನನ್ನು ಬಂಧಿಸಲಾಗಿತ್ತು. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ವೇಳೆ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿ ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೃತ್ಯ ನಡೆಸಿ ಮೈಸೂರಿಂದ ಖಾಸಗಿ ಬಸ್ ಮೂಲಕ ಆರೋಪಿ ತೆರಳಿದ್ದನು. ಈತ ಮಂಡ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದು, ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ 4 ತಿಂಗಳ ಹಿಂದಷ್ಟೆ ಹೊರಬಂದಿದ್ದ. ಮದ್ಯ ವ್ಯಸನಿಯಾಗಿದ್ದ ಈತ ತನ್ನ ಚಾಳಿಯನ್ನು ಬಿಡದೆ ಅಮಾಯಕ ಬಾಲಕಿಯನ್ನು ಮುಗಿಸಿದ್ದಾನೆ.

ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಹುಡುಗಿ!
ದಸರಾ ಹಬ್ಬದ ಸಂದರ್ಭದಲ್ಲಿ ಬಲೂನ್‌ಗಳನ್ನು ಮಾರಾಟ ಮಾಡಲು ಕಲಬುರಗಿಯಿಂದ ಮೈಸೂರಿಗೆ ಬಂದಿದ್ದ ಬಡ ವಲಸೆ ಕುಟುಂಬವೊಂದರ ಬಾಲಕಿ ದುರಂತ ಅಂತ್ಯ ಕಂಡಿದ್ದಾಳೆ.
ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಕಲಬುರಗಿಯ ಸೂಕ್ಷ್ಮ ಅಲೆಮಾರಿ ಸಮುದಾಯಕ್ಕೆ ಸೇರಿದ ಸುಮಾರು 50 ಕುಟುಂಬಗಳು ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಾತ್ಕಾಲಿಕವಾಗಿ ಡೇರೆ ಹಾಕಿ ತಂಗಿದ್ದವು.
ಚಾಮುಂಡಿ ಬೆಟ್ಟ, ವಸ್ತು ಪ್ರದರ್ಶನ, ಬನ್ನಿ ಮಂಟಪ, ದೇವರಾಜ ಮಾರುಕಟ್ಟೆ ಸೇರಿದಂತೆ ಹಲವು ಸ್ಥಳಗಳಲ್ಲಿ ಇವರು ವ್ಯಾಪಾರ ಮಾಡುತ್ತಿದ್ದರು. ಈ ಕುಟುಂಬಗಳಿಗೆ, ದಸರಾ ಹಬ್ಬವು ಕೇವಲ ಹಬ್ಬದ ಸಂಭ್ರಮವಾಗಿರಲಿಲ್ಲ, ದಸರಾದಲ್ಲಿ ಬಲೂನ್‌ಗಳು, ಆಟಿಕೆಗಳು ಮತ್ತು ಸಣ್ಣ ವಸ್ತುಗಳನ್ನು ಮಾರಾಟ ಮಾಡಿ ಜೀವನೋಪಾಯಕ್ಕಾಗಿ ಹಣ ಸಂಪಾದಿಸುತ್ತಿದ್ದರು.

ಈ ಪೈಕಿ ಒಂದು ಕುಟುಂಬಕ್ಕೆ ಸೇರಿದ 10 ವರ್ಷದ ಬಾಲಕಿಯೊಬ್ಬಳು ರಾತ್ರಿ ವೇಳೆ ಕಾಣೆಯಾಗಿದ್ದಾಳೆ. ನಿನ್ನೆ ರಾತ್ರಿ 12 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡು ಬಂದಿದ್ದ ಕುಟುಂಬ, ಒಟ್ಟಿಗೆ ಎಂಟು ಜನ ಮಲಗಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಮಳೆ ಬಂದಿದೆ. ಆಗ ಎಚ್ಚರಗೊಂಡಾಗ ಬಾಲಕಿಯು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕುಟುಂಬಸ್ಥರು ಮಳೆಯಲ್ಲೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.

ಸ್ವಲ್ಪ ಸಮಯದ ನಂತರ ಬಾಲಕಿ ಡೇರೆಯಿಂದ ಸುಮಾರು 50 ಮೀಟರ್ ದೂರದಲ್ಲಿ ನಿರ್ಜೀವವಾಗಿ ಬಿದ್ದಿರುವುದು ನಮಗೆ ತಿಳಿಯಿತು. ಆಕೆಯ ದೇಹವು ಭಾಗಶಃ ಮಣ್ಣಿನ ರಾಶಿಯಲ್ಲಿ ಹೂತುಹೋಗಿತ್ತು ಎಂದು ಸಂತ್ರಸ್ತೆಯ ಸೋದರಸಂಬಂಧಿ ತಿಳಿಸಿದ್ದಾರೆ.

ಮಣ್ಣಿನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು, ಅಪ್ರಾಪ್ತೆ ಮೈ ಮೇಲೆ ಬಟ್ಟೆ ಇರದ ಕಾರಣ ಬಾಲಕಿ ಕುಟುಂಬ ಮತ್ತು ತನಿಖಾ ತಂಡದ ಸದಸ್ಯರು ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದರು. ಡಿಸಿಪಿ ಬಿಂದು ಮಣಿ, ಸುಂದರ್ ರಾಜ್ ಮತ್ತು ವಿಶೇಷ ಪೊಲೀಸ್ ತಂಡದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿದರು.
ಅತ್ಯಾಚಾರ ಎಸಗಿ ಕೊಲೆ ಮಾಡಿ ಎಸ್ಕೇಪ್‌ ಆಗಿದ್ದ ಆರೋಪಿಯನ್ನ ಕೊಳ್ಳೇಗಾಲದಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಕೃತ್ಯ ಎಸಗಿದ್ದ ವಿಕೃತ ಕಾಮುಕ ಮೈಸೂರಿನ ಖಾಸಗಿ ಬಸ್ ನಿಲ್ದಾಣದಿಂದ ಕೊಳ್ಳೇಗಾಲಕ್ಕೆ ಹೋಗಿದ್ದ. ಇತ್ತ ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ತನಿಖೆ ನಡೆಸುತ್ತಿದ್ದ ಪೊಲೀಸರು ಕೊಳ್ಳೇಗಾಲದಲ್ಲಿ ಬಂಧಿಸಿ, ಮೈಸೂರಿಗೆ ಕರೆತಂದಿದ್ದರು. ಈ ವೇಳೆ ಈತ ತಪ್ಪಿಸಲು ಯತ್ನಿಸಿ ಪೊಲೀಸರ ಗುಂಡೇಟು ತಿಂದು ಆಸ್ಪತ್ರೆ ಪಾಲಾಗಿದ್ದಾನೆ.

error: Content is protected !!