ರಜೆ ವಿಸ್ತರಣೆಯಿಂದ ಪಾಠಕ್ಕೆ ತೊಂದರೆಯಾಗದು: ಸಚಿವ ಮಧು ಬಂಗಾರಪ್ಪ

ಮಂಗಳೂರು: ಜಾತಿಗಣತಿಗೆ ಶಾಲೆಗಳಿಗೆ ದಸರಾ ರಜೆಯನ್ನು ವಿಸ್ತರಿಸಿದ್ದು, ತರಗತಿ ನಡೆಸಲು, ಪಾಠಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ತೊಂದರೆಯಾಗುವುದಿಲ್ಲ ಎಂದು ಬುಧವಾರ(ಅ.8)ದ ಪತ್ರಿಕಾಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿಕ್ಷಕರ ಸಂಘದವರು ಮುಖ್ಯಮಂತ್ರಿಯವರಿಗೆ ಮಾಡಿರುವ ಕೋರಿಕೆಯಂತೆ ರಜೆ ವಿಸ್ತರಿಸಲಾಗಿದೆ. ಶಾಲಾ ವಾರ್ಷಿಕ ಕ್ಯಾಲೆಂಡರ್‌ನಂತೆ 240 ದಿನಗಳಿವೆ. ಆರ್‌ಟಿಇ ಕಾಯ್ದೆ ಪ್ರಕಾರ ಕಡ್ಡಾಯವಾಗಿ ಬಳಸಬೇಕಾದ ದಿನಗಳು 220. ಅದರಂತೆ 20 ದಿನಗಳು ಹೆಚ್ಚುವರಿ ಇವೆ ಎಂದರು.

ಮಳೆಯಿಂದಾಗಿ ಹಲವು ದಿನಗಳು ಹೆಚ್ಚುವರಿ ರಜೆಯಾಗಿರುವ ಜಿಲ್ಲೆಗಳಲ್ಲಿ ಪಠ್ಯಗಳನ್ನು ಪೂರೈಸಲು ಕ್ರಮ ವಹಿಸಲು ಜಿಲ್ಲಾಡಳಿತದ ಮೂಲಕ ಸೂಚಿಸಲಾಗಿದೆ ಎಂದರು.

error: Content is protected !!