ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್ಸ್‌ಗಳ ಗುರಿಯಾಗಿದ್ದಾರೆ. ಈ ಬಾರಿ ವಿವಾದದ ಕೇಂದ್ರಬಿಂದುವಾಗಿದ್ದು, ಅವರು ಧರಿಸಿದ್ದ ಹಿಜಾಬ್.
ಇತ್ತೀಚೆಗೆ ದೀಪಿಕಾ ಪಡುಕೋಣೆ ಮತ್ತು ಅವರ ಪತಿ ನಟ ರಣವೀರ್ ಸಿಂಗ್, ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಇರುವ “ಎಕ್ಸ್‌ಪೀರಿಯೆನ್ಸ್ ಅಬುಧಾಬಿ” ಸಂಸ್ಥೆಯ ಪ್ರಾದೇಶಿಕ ಬ್ರಾಂಡ್ ರಾಯಭಾರಿಗಳಾಗಿ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ವೀಡಿಯೊ ಕ್ಲಿಪ್‌ನಲ್ಲಿ, ದಂಪತಿಗ ಪಾಶ್ಚಿಮಾತ್ಯ ಉಡುಗೆಯಲ್ಲಿ ಲೌವ್ರೆ ಅಬುಧಾಬಿ ವಸ್ತುಸಂಗ್ರಹಾಲಯ ಹಾಗೂ ನಗರದ ಪ್ರಸಿದ್ಧ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡುತ್ತಿರುವುದು ಕಾಣಬಹುದು. ಮಸೀದಿಯೊಳಗೆ ಪ್ರವೇಶಿಸುವಾಗ ದೀಪಿಕಾ ಕೆಂಪು ಬಣ್ಣದ ಹಿಜಾಬ್ ಧರಿಸಿಸಿದ್ದರು. ಅದು ಅವರ ಮುಖ ಮತ್ತು ಕೈಗಳನ್ನು ಹೊರತುಪಡಿಸಿ ಇಡೀ ದೇಹವನ್ನು ಮುಚ್ಚಲಾಗಿತ್ತು. ರಣವೀರ್ ಸಿಂಗ್ ಕಪ್ಪು ಸೂಟ್ ಧರಿಸಿದ್ದರು.
ಆದರೆ ಕೆಲವೇ ಗಂಟೆಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಕೆಲವು ನೆಟಿಜಿನ್ಸ್ ದೀಪಿಕಾ “ಹಿಜಾಬ್” ಧರಿಸಿದ್ದಕ್ಕಾಗಿ ಟೀಕಿಸಿದ್ದಾರೆ.