ಮಂಗಳೂರು: ಅಲ್ ನಜೀಂ ಉಸ್ ಸಕೀಬ್ ಪರ್ಫ್ಯೂಮ್ ಟ್ರೇಡರ್ಸ್ ಸಂಸ್ಥೆಯ ಹೊಸ ಫರ್ಫ್ಯೂಮ್ ಬ್ರಾಂಡ್ ‘ತುಝರ್ (TUZHAR)’ ಬಿಡುಗಡೆ ಕಾರ್ಯಕ್ರಮವು ಅಕ್ಟೋಬರ್ 9ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ಬೆಂಡೋರ್‌ವೆಲ್‌ನ ಅಗ್ನೆಸ್ ಕಾಲೇಜು ಪಕ್ಕದ ಸೇಂಟ್ ಸೆಬಾಸ್ಟಿಯನ್ ಮಿನಿ ಹಾಲ್ನಲ್ಲಿ ನಡೆಯಲಿದೆ ಎಂದು ಎಂಡಿ ಅಬ್ದುಲ್ ಹಮೀದ್ ಹೇಳಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮವನ್ನು ಯೆನೆಪೊಯ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಕುಲಪತಿ ಡಾ. ಯೆನೆಪಯ ಅಬ್ದುಲ್ಲಾ ಕುಂಞಿ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ತುಝರ್ ಬ್ರಾಂಡ್ ಅತ್ಯುತ್ತಮ ಬ್ರಾಂಡಿನ ಸುಗಂಧ ದ್ರವ್ಯವಾಗಿದ್ದು, ವಿಶ್ವದೆಲ್ಲೆಡೆ ಮನ ಮಾತಾಗಿದೆ. ದೇಶ- ವಿದೇಶಗಳಲ್ಲಿ ಮನೆ ಮಾತಾಗಿರುವ ಸುಗಂಧ ದ್ರವ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಈಗಾಗಲೇ ಎರಡು ಅಂತಾರಾಷ್ಟ್ರೀಯ ಬ್ರಾಂಡ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ತಯಾರು ಮಾಡಿ ವಿದೇಶಗಳಿಗೆ ರಫ್ತು ಮಾಡಲಾಗುವುದು. ಜೊತೆಗೆ ಮಂಗಳೂರಿನಲ್ಲಿ ಕಂಪೆನಿಯಲ್ಲಿ ಸ್ಥಾಪಿಸಿ ಇಲ್ಲಿನ ಜನತೆಗೆ ಉದ್ಯೋಗ ಒದಗಿಸಲಾಗುವುದು. ತಮ್ಮ ಕಂಪೆನಿಯ ಸ್ಟಾಲ್‌ಗಳನ್ನು ಹಾಕಿ ಸ್ಟಾರ್ಟ್ ಅಪ್ ಮಾಡುವವರಿಗೆ ಅವರು ಉತ್ತಮ ರೀತಿಯಲ್ಲಿ ಬೆಳೆಯಲು ಸಹಕಾರ ಮಾಡಲಾಗುವುದು ಎಂದರು.
ತುಝರ್ ಸುಗಂಧ ದ್ರವ್ಯ ಅತ್ಯಂತ ಉತ್ತಮ ರೀತಿಯ ಬ್ರಾಂಡ್ ಆಗಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಗ್ರಾಹಕರು ಯಾವ ರೀತಿ ಅಪೇಕ್ಷಿಸುತ್ತಾರೆ ಅದೇ ರೀತಿಯ ಪರಿಮಳದ ಪರ್ಫ್ಯೂಮ್ ತಯಾರಿಸಿಕೊಡಲಾಗುವುದು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದೇಶ-ವಿದೇಶಗಳಲ್ಲಿ ಭದ್ರ ನೆಲೆಯೂರುವ ಸಂಕಲ್ಪವನ್ನು ಎಂಡಿ ಅಬ್ದುಲ್ ಹಮೀದ್ ಇದೇ ಸಂದರ್ಭದಲ್ಲಿ ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ರಾಷ್ಟ್ರೀಯ ಆಯೋಗದ ಅಧ್ಯಕ್ಷ (ಆಲೈಡ್ ಮತ್ತು ಹೆಲ್ತ್ ಕೇರ್ ಪ್ರೊಫೆಷನ್ಸ್) ಡಾ. ಯು. ಟಿ. ಇಫ್ತಿಖಾರ್ ಫರೀದ್, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಅಲ್ ಮುಝೈನ್ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಹಾಜಿ ಜಕರಿಯಾ ಜೋಕ್ಕಟ್ಟೆ, ಎಸ್ಎಂಆರ್ ಗ್ರೂಪ್ ಅಧ್ಯಕ್ಷ ಎಸ್. ಎಂ. ರಶೀದ್ ಹಾಜಿ, ರೋಹನ್ ಕಾರ್ಪೊರೇಶನ್ ಅಧ್ಯಕ್ಷ ರೋಹನ್ ಆರ್. ಮೊಂಟೈರೋ, ವೈದ್ಯಕೀಯ ತಜ್ಞ ಪ್ರೊ. ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಉದ್ಯಮಿ ರಿಯಾಜ್ ಬಾವಾ, ಎ.ಕೆ. ಗ್ರೂಪ್ ಅಧ್ಯಕ್ಷ ಎ. ಕೆ. ನಿಯಾಝ್, ಬೆಂಡೋರ್ ಚರ್ಚ್ ಸಹಪಾದ್ರಿ ರೆವ್. ಡಾ. ಒಸ್ಮಂಡ್ ರೋಷನ್ ಡಿ’ಸೋಜಾ, ಪ್ಲಾಸ್ಟಿಕ್ ಲ್ಯಾಂಡ್ ಗ್ರೂಪ್ ಅಧ್ಯಕ್ಷ ಅಸ್ಕರ್ ಅಲಿ, ಶ್ರೀ ಮಂಗಲಾದೇವಿ ದೇವಾಲಯದ ಅನುವಂಶಿಕ ಮೊಕ್ತೇಶ್ವರರು ಶ್ರೀ ಹರೀಶ್ ಇಥಲ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮೊಹಮ್ಮದ್ ಕುಂಹಿ, ಕಣ್ಣೂರು ಮತ್ತು ಕಾಲಿಕಟ್ ವಿಶ್ವವಿದ್ಯಾಲಯಗಳ ಮಾಜಿ ಕುಲಪತಿ ಪ್ರೊ. ಡಾ. ಅಬ್ದುಲ್ ರಹೀಮಾನ್, ಮಂಗಳೂರು ಮಹಾನಗರಪಾಲಿಕೆಯ ಮಾಜಿ ಸದಸ್ಯ ಕಿಶೋರ್ ಕೊಟ್ಟಾರಿ, ಪಿ.ಸಿ. ಗ್ರೂಪ್ ಅಧ್ಯಕ್ಷ ಹಶೀರ್ ಪಿ.ಸಿ. ಹಾಗೂ ವರ್ಲ್ಡ್‌ವೈಡ್ ಗ್ರೂಪ್ ಅಧ್ಯಕ್ಷ ಮೊಯಿದಿನ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ +91 8088 947 906 ಈ ನಂಬರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಫಿಹ ಅಹ್ಮದ್, ಕೃತಿ ಶೆಟ್ಟಿ, ನಬಿಲ್ ಮೊಹಮ್ಮದ್, ಪೃಥ್ವಿ ಶೆಟ್ಟಿ, ಅರಾಫತ್ ಹಾಗೂ ಸಾಯ್ಹೀಲ್ ರೈ ಉಪಸ್ಥಿತರಿದ್ದರು.