13 ವರ್ಷಗಳ ಹಿಂದೆ ಕಾಣೆಯಾಗಿದ್ದ ಕಾರ್ಕಳದ ಯುವಕ ಬೆಂಗಳೂರಿನಲ್ಲಿ ಪತ್ತೆ

ಕಾರ್ಕಳ: ಕಳೆದ 13 ವರ್ಷಗಳ ಹಿಂದೆ ಕಾಣೆಯಾಗಿದ್ದ ಕಾರ್ಕಳದ ಯುವಕ ಬೆಂಗಳೂರಿನಲ್ಲಿ ಇಂದು(ಅ.8) ಪತ್ತೆಯಾಗಿದ್ದಾರೆ.

ಪ್ರಭಾಕರ ಪ್ರಭುರವರ ಪುತ್ರ ಅನಂತ ಕೃಷ್ಣ ಪ್ರಭು (16), ಮುಂಡ್ಕೂರಿನ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು , ದಿನಾಂಕ 06/12/2012 ರಂದು ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ ವಾಪಸ್ಸಾಗದೇ ಕಾಣೆಯಾಗಿದ್ದರು. ಈ ಕುರಿತಂತೆ ಅವರ ತಂದೆಯ ದೂರಿನ ಮೇಲೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಿ, ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ತನಿಖಾ ತಂಡವು ಪರಿಶೀಲನೆ ಮಾಡಿ, ಅನಂತ ಕೃಷ್ಣ ಪ್ರಭು (29) ಈಗ ಬೆಂಗಳೂರಿನಲ್ಲಿ ವಾಸಿಸುತ್ತಿರುವುದನ್ನು ದೃಢಪಡಿಸಿತು.

ತನಿಖಾ ತಂಡದಲ್ಲಿ ಪ್ರಭು ಡಿ ಟಿ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪವಿಭಾಗ; ಸುದರ್ಶನ್ ದೊಡಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ; ಈರಣ್ಣ ಶಿರಗುಂಪಿ, ಪೊಲೀಸ್ ಉಪನಿರೀಕ್ಷಕರು, ಉಡುಪಿ ನಗರ; ಹೆಚ್ಸಿ ಇಮ್ರಾನ್, ಹೆಚ್ಸಿ ಚೇತನ್; ಪಿಸಿ ಸಂತೋಷ್ ದೇವಾಡಿಗ ಮತ್ತು ಪಿಸಿ ಮಲ್ಲಯ್ಯ ಹಿರೇಮಠ ಸೇರಿದ್ದರು.

error: Content is protected !!