ಜೆಡಿಎಸ್ ಜಾತ್ಯತೀತ ಪದವನ್ನು ಕೈಬಿಟ್ಟು ರಾಜಕಾರಣ ಮಾಡಲಿ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಜೆಡಿಎಸ್ ತನ್ನ ಹೆಸರಿನಲ್ಲಿರುವ ‘ಜಾತ್ಯತೀತ’ ಪದವನ್ನು ಕೈಬಿಟ್ಟು ರಾಜಕಾರಣ ಮಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಗೋಸುಂಬೆ ಬಣ್ಣವನ್ನು ಮಾತ್ರ ಬದಲಿಸುತ್ತದೆ. ಆದರೆ ಜೆಡಿಎಸ್ ಬಣ್ಣವನ್ನೇ ಅಲ್ಲ, ಸಿದ್ಧಾಂತವನ್ನೂ, ಮಾತುಗಳನ್ನೂ ಬದಲಿಸುವ ಮೂಲಕ ತನ್ನ ನಿಜ ಸ್ವರೂಪವನ್ನು ಅನಾವರಣಗೊಳಿಸಿದೆ ಎಂದು ಆರೋಪಿಸಿದ್ದಾರೆ.

ಒಂದು ಕಾಲದಲ್ಲಿ ಸಂಘವೆಂದರೆ ‘ಸದಾನಂದ’ದ ಪರಿವಾರ ಎಂದು ಆರೋಪಿಸಿದ್ದವರು, ಇಂದು ಸಂಘದ ಸಹವಾಸದಲ್ಲೇ ಸದಾ ಆನಂದವಿದೆ ಎಂದು ಹೇಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

error: Content is protected !!