ಕಾಟಿಪಳ್ಳದಲ್ಲಿ ಗೋಮಾಂಸ ಮಾರಾಟ; ಓರ್ವ ಸೆರೆ, ಇನ್ನಿಬ್ಬರು ಪರಾರಿ! ಪೊಲೀಸರ ನಿರ್ಧಾರವೇನು?

ಮಂಗಳೂರು: ಕಾಟಿಪಳ್ಳ 2ನೇ ಬ್ಲಾಕ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿದ್ದ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಬೈಕಂಪಾಡಿಯ ಅಂಗಾರಗುಂಡಿ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ (42) ಬಂಧಿತ ಆರೋಪಿ. ಕಾಟಿಪಳ್ಳದ ಇಮ್ತಿಯಾಜ್ ಹಾಗೂ ಪಡುಬಿದ್ರೆಯ ಅಬ್ಬಾಸ್ ಗುಡ್ಡೆ ತಲೆಮರೆಸಿದ್ದಾರೆ. ಆರೋಫಿಗಳು ಫ್ರೀಜರ್‌ನಲ್ಲಿರಿಸಿದ್ದ 42 ಕೆ.ಜಿ. ದನ ಮಾಂಸ, ಮಾರಾಟಕ್ಕೆ ಬಳಸಿದ ದ್ವಿಚಕ್ರ ವಾಹನ ಹಾಗೂ ರೂ. 1,42,500/- ನಗದು ವಶಪಡಿಸಲಾಗಿದೆ.

ಬಂಧಿತ ಮೊಹಮ್ಮದ್ ಇಸ್ಮಾಯಿಲ್ ಹಿಂದೆಯೂ ಹಲವು ದನ ಮಾರಾಟ ಮತ್ತು ವಧೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ 3 ದನದ ಮಾಂಸ ಸಂಬಂಧಿತ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಆರೋಪಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ. 123/2025 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ನಾಟಕ ದನಗಳ ವಧೆ ತಡೆ ಮತ್ತು ಸಂರಕ್ಷಣಾ ಕಾಯ್ದೆ–2020 ರ ಕಲಂ 7, 12(1) ಮತ್ತು ಭಾರತೀಯ ದಂಡ ಸಂಹಿತೆಯ ಕಲಂ 111 ರಂತೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿದೆ.

ಪೊಲೀಸರ ನಿರ್ಧಾರವೇನು?
ತಲೆಮರಿಸಿಕೊಂಡಿರುವ ಕಾಟಿಪಳ್ಳದ ಇಮ್ತಿಯಾಜ್ ಹಾಗೂ ಪಡುಬಿದ್ರೆಯ ಅಬ್ಬಾಸ್ ಗುಡ್ಡೆ ಮೇಲೆಯೂ ಮೂಲ್ಕಿ ಹಾಗೂ ಪಡುಬಿದ್ರೆ ಠಾಣೆಯಲ್ಲಿ ದನಕಳವು ಪ್ರಕರಣಕ್ಕೆ ಸಂಬಂಧಿಸಿ ತಲಾ ಒಂದೊಂದು ಪ್ರಕರಣಗಳಿವೆ.
ಮೂವರು ಆರೋಪಿಗಳು ಹಲವಾರು ಬಾರಿ ಕಾನೂನು ಬಾಹಿರವಾಗಿ ದನ ಸಾಗಾಟ, ಮಾರಾಟ ಹಾಗೂ ವಧೆ ಮಾಡಿದ ಬಗ್ಗೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಇವರ ವಿರುದ್ಧ ಸಂಘಟಿತ ಅಪರಾಧಗಳ ಕಲಂ ಅಳವಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಕಮೀಷನರ್‌ ಸುಧೀರ್‌ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತರ ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರಾಸದ ಮಿಥುನ್ ಹೆಚ್.ಎನ್. IPS ಮತ್ತು ರವಿಶಂಕರ್ ಅವರ ನಿರ್ದೇಶನದಲ್ಲಿ, ಸುರತ್ಕಲ್ ಠಾಣಾ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ನೇತೃತ್ವದಲ್ಲಿ, ಪಿಎಸ್ಐಗಳಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ದನ ನಾಯ್ಕ್, ಶಶಿಧರ ಶೆಟ್ಟಿ, ಹಾಗೂ ಸಿಬ್ಬಂದಿ ಅಣ್ಣಪ್ಪ, ಉಮೇಶ್ ಕುಮಾರ್, ತಿರುಪತಿ, ಕಾರ್ತಿಕ್, ಓಂಪ್ರಕಾಶ್ ಬಿಂಗಿ, ಸಂಜೀವ್ ಕುಮಾರ್, ಮಂಜುನಾಥ ಆಯಟ್ಟಿ ಮತ್ತು ನಾಗರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!