ಮಂಗಳೂರಿನಲ್ಲಿ ಅಕ್ಟೋಬರ್ 5ರಂದು ಅದ್ಧೂರಿಯಾಗಿ ನಡೆಯಲಿದೆ ʻರಚನಾ ಅವಾರ್ಡ್ಸ್ʼ

ಮಂಗಳೂರು: ಉದ್ಯಮ, ವೃತ್ತಿ, ಕೃಷಿ ಮತ್ತು ವಿದೇಶದಲ್ಲಿ ಸಾಧನೆಗೈದವರನ್ನು ಗುರುತಿಸಿ ಗೌರವಿಸುವ “ʻರಚನಾ ಅವಾರ್ಡ್ಸ್ 2023–25” ಭಾನುವಾರ, ಅಕ್ಟೋಬರ್ 5ರಂದು ಸಂಜೆ 6.00 ಗಂಟೆಗೆ ಮಂಗಳೂರಿನ ಮಿಲಾಗ್ರೆಸ್ ಜುಬಿಲಿ ಹಾಲ್‌ನಲ್ಲಿ ಅದ್ಧೂರಿಯಾಗಿ ಜರುಗಲಿದೆ.

ಮಂಗಳೂರಿನ ಕತೋಲಿಕ್ ಉದ್ಯಮಿಗಳ ವೇದಿಕೆಯಾದ ʻರಚನಾʼ RACHANA (Catholic Chamber of Commerce & Industry, Mangalore) ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ದೇಶ–ವಿದೇಶದ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ವಿಜೇತರನ್ನು ಗೌರವಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ. ಗೌ. ಡಾ. ಪೀಟರ್ ಪಾಲ್ ಸಾಲ್ದಾನ್ಹ ಅವರು ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಸರ್ಕಾರದ ಇಂಧನ ಸಚಿವ ಕೆ. ಜೆ. ಜಾರ್ಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅದೇ ವೇಳೆ ವಿಧಾನ ಪರಿಷತ್‌ ಸದಸ್ಯ ಐವಾನ್ ಡಿʼಸೋಜಾ, ಯು.ಎ.ಇ.ಯ ಬರ್ಜೀಲ್ ಹೋಲ್ಡಿಂಗ್ಸ್‌ ಗ್ರೂಪ್ ಸಿಇಒ ಜಾನ್ ಸುನಿಲ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕಾರ್ಯ ನಿರ್ವಹಣಾ ಕುಲಪತಿ, ಪ್ರಾಧ್ಯಾಪಕಿ ಡಾ. ಸಿಂಥಿಯಾ ಮೆನೆಜೆಸ್ ಗೌರವಾನ್ವಿತರಾಗಿ ಹಾಜರಾಗಲಿದ್ದಾರೆ.

Rachana Awardees 2023–25 ಪಟ್ಟಿ
ರಚನಾ ಎಂಟ್ರಪ್ರುನರ್ ಅವಾರ್ಡ್ – ಮಿ. ಆಸ್ಟಿನ್ ರೋಚ್, ಬೆಂಗಳೂರು
ರಚನಾ ಪ್ರೊಫೆಷನಲ್ ಅವಾರ್ಡ್ – ಮಿ. ಜಾನ್ ರಿಚರ್ಡ್ ಲೋಬೋ (KAS), ಮಂಗಳೂರು
ರಚನಾ ಅಗ್ರಿಕಲ್ಚರಿಸ್ಟ್ ಅವಾರ್ಡ್ – ಡಾ. ಗಾಡ್ವಿನ್ ರೊಡ್ರಿಗ್ಸ್ (PhD), ಬೆಲ್ವೈ–ಮಂಗಳೂರು
ರಚನಾ ಎನ್‌ಆರ್‌ಐ ಎಂಟ್ರಪ್ರುನರ್ ಅವಾರ್ಡ್ (Mr Ronald Colaco & family ಸಂಸ್ಥೆಯಿಂದ ಪ್ರಾಯೋಜಿತ) – ಮಿ. ಪ್ರತಾಪ್ ಮೆಂಡೋನ್ಕಾ, ದುಬೈ (U.A.E.)
ರಚನಾ ಔಟ್‌ಸ್ಟಾಂಡಿಂಗ್ ವುಮನ್ ಅವಾರ್ಡ್ – ಮಿಸೆಸ್ ಶೋಬಾ ಮೆಂಡೋನ್ಕಾ, ದುಬೈ (U.A.E.)

ವಿಶೇಷ ಆಕರ್ಷಣೆ
ಸಾಧನೆಗೈದ ಉದ್ಯಮಿ, ವೃತ್ತಿಪರರು ಹಾಗೂ ಎನ್‌ಆರ್‌ಐ ಸಮುದಾಯದ ಪ್ರತಿನಿಧಿಗಳನ್ನು ಗೌರವಿಸುವ ಈ ಕಾರ್ಯಕ್ರಮವು ಮಂಗಳೂರಿನ ಸಾಂಸ್ಕೃತಿಕ ಹಾಗೂ ವಾಣಿಜ್ಯ ವಲಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಸಮಾರಂಭದ ನಂತರ ಫೆಲೋಶಿಪ್‌ ಹಾಗೂ ಊಟದ ವಸ್ಥೆಯನ್ನೂ ಕಲ್ಪಿಸಲಾಗಿದೆ.

ಈ ಕಾರ್ಯಕ್ರಮ ರಚನಾ ಆಡಳಿತ ಮಂಡಳಿಯ ಅಧ್ಯಕ್ಷ ಜಾನ್ ಬಿ. ಮೊಂತರೋ, ಉಪ ಅಧ್ಯಕ್ಷ ನವೀನ್ ಲೋಬೋ, ಕಾರ್ಯದರ್ಶಿ ವಿಜಯ್ ವಿ. ಲೋಬೋ, ಖಜಾಂಚಿ ನೆಲ್ಸನ್ ಮೊಂಡೈರೋ, ಸಹ ಕಾರ್ಯದರ್ಶಿ ವಾಲ್ಟರ್ ಡಿ’ಕುನ್ಹಾ ಮುಂದಾಳತ್ವದಲ್ಲಿ ನಡೆಯುತ್ತಿದೆ. ಅಲ್ಲದೆ ಕಾರ್ಯಕಾರಿ ಸಮಿತಿ ಸದಸ್ಯರಾದ ಸ್ಟಾನಿ ಅಲ್ವಾರೆಸ್, ಯೂಲಲಿಯಾ ಡ್ಸೋಜಾ, ಲಾವಿನಾ ಎಸ್. ಮೊಂಡೈರೋ, ಸಿಎ ವಿಕ್ರಂ ಸಲ್ಪಾಂಝಾ, ಅಲ್ವಿನ್ ಪಿ. ಸೆಕೈರಾ, ರೋಷನ್ ಡಿ’ಸೋಜಾ, ವಿಂಸೆಂಟ್ ಕುಟಿಂಹಾ, ರೋಹನ್ ಮೊಂಡೈರೋ, ಸಚಿನ್ ಪೆರೈರಾ, ಸಂತೋಶ್ ಡಿ’ಸೋಜಾ, ಪ್ರಶಸ್ತಿ ಸಮಿತಿಯ ಸಂಯೋಜಕ  ಮಿಸೆಸ್ ಯುಲಾಲಿಯಾ ಡಿಸೋಜಾ ಸಹಕರಿಸುತ್ತಿದ್ದಾರೆ.

ಮಂಗಳೂರು: ರಚನಾ ಸಂಸ್ಥೆಯ ಪ್ರಶಸ್ತಿಗೆ ಐವರ ಆಯ್ಕೆ

error: Content is protected !!