ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾನಮಸ್ಕಾರ ಪೂಜೆ

ತೋಕೂರು : ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಹಳೆಯಂಗಡಿ ಇಲ್ಲಿ ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾದೇವಿಗೆ ದುರ್ಗಾನಮಸ್ಕಾರ ಪೂಜೆಯು ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ಟಿ ಕೆ ಮಧುಸೂಧನ್ ಆಚಾರ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಸಂಪತ್ ಜೆ ಶೆಟ್ಟಿ ತೋಕೂರಗುತ್ತು, ಅಶೋಕ್ ಕುಂದರ್, ಸವಿತಾ ಬೆಳ್ಳಾಯರು, ವಿಶ್ವನಾಥ್, ಭಾಸ್ಕರ್ ದೇವಾಡಿಗ ಮತ್ತು ಟಿ ಪುರುಷೋತ್ತಮ ರಾವ್ ಹಾಗೂ ಹರಿದಾಸ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!