ಮಂಗಳೂರು: ರಾಮಕ್ಷತ್ರಿಯ ಸೇವಾ ಸಂಘ (ರಿ.), ಮಂಗಳೂರು ವತಿಯಿಂದ “ಅಭಿನಂದನಾ ಸಮಾರಂಭ” ಇಂದು ನಗರದ ಮೋರ್ಗನ್ಸ್ ಗೇಟ್‌ನ ಪಾಲೆಮಾರ್ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಯವರನ್ನು ಪ್ರದೀಪ್ ಪಾಲೆಮಾರ್ ದಂಪತಿ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ. ಶಾಂತರಾಮ ಶೆಟ್ಟಿಯವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ನುಡಿಯನ್ನು ಯೋಗಿಶ್ ಕುಮಾರ್ ಜೆಪ್ಪು ನೆರವೇರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸುವುದರ ಮೂಲಕ ನೆರೆವೆರೆಸಿದರು.
ವೈದ್ಯಕೀಯ ವೃತ್ತಿಯಲ್ಲಿ25 ವರ್ಷ ಸೇವೆ ಸಲ್ಲಿಸಿದ ಪ್ರತಿಷ್ಟಿತ ರಾಜ್ಯ ಪ್ರಶಸ್ತಿ ಹಾಗೂ ಜಿಲ್ಲಾ ಪ್ರಶಸ್ತಿಯನ್ನು ಪಡೆದ ಹೃದ್ರೋಗ ತಜ್ಞ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡಾ.ಹೆಚ್. ಪ್ರಭಾಕರ್, ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ತಜ್ಞರಾದ ಡಾ. ಸದಾನಂದ ಪೂಜಾರಿ, ಡಾ. ಬಿ.ಸಿ.ರಾಯ್ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕೃತರಾದ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಹಾಗೂ ಅಂತಾರಾಷ್ಟ್ರೀಯ ವೈಟ್ ಲಿಫ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಕ್ರೀಡಾಪಟು ಕು. ನಾಗಶ್ರೀ ಗಣೇಶ ಶೇರಿಗಾರ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಮಂಗಳೂರು ದ.ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ರವರು ಸಮಾಜಕ್ಕೆ ಸೇವೆಗೈದ ಸಾಧಕರಿಗೆ ಶ್ಲಾಘಿಸಿದರು. ಈ ಗಣ್ಯರು ತುಳುನಾಡಿಗೆ ಕೀರ್ತಿ ತರುವಂತಹ ಕಾರ್ಯಮಾಡಿದ್ದಾರೆ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಗೈಯಲಿ ಎಂದು ಆಶಿಸಿದರು.
ಬಳಿಕ ಮಾತನಾಡಿದ ವಿದ್ಯಾಪ್ರಸನ್ನ ಸ್ವಾಮೀಜಿಯವರು, ಸಮಾಜ ಸೇವೆ ಮಾಡುವುದೆಂದರೆ ದೇವರವಸೇವೆ ಎಂದು ಅಭಿನಂದನೆ ಸ್ವೀಕರಿಸಿದ ಗಣ್ಯರನ್ನು ಶ್ಲಾಘಿಸಿದರು. ಇದರಂತೆಯೇ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳಿಸಲಿ ಎಂದು ಹಾರೈಸಿದರು.
ಬಳಿಕ ಮಾತನಾಡಿದ ಖ್ಯಾತ ವೈದ್ಯ ಡಾ.ಶಾಂತರಾಮ್ ಶೆಟ್ಟಿಯವರು ಮಾಜಿ ಸಚಿವರಾದ ಕೃಷ್ಣ ಪಾಲೆಮಾರ್ ರವರು ಒಬ್ಬ ಕನಸುಗಾರರು, ರಾಮಕ್ಷತ್ರಿಯ ಸಮದಾಯ ಒಂದು ಚಿಕ್ಕ ಸಮುದಾಯದಲ್ಲಿ ಹುಟ್ಟಿ ಬೆಳೆದು ಈ ನಾಡಿಗೆ ಏನು ಮಾಡಬೇಕೆಂದು ತೋರಿಸಿಕೊಟ್ಟವರು ಕೃಷ್ಣ ಪಾಲೆಮಾರ್ ರವರು ಎಂದರು.ಸರಕಾರಿ ಆಸ್ಪತ್ರೆಯಲ್ಲಿ ಹೇಗೆ ಸೇವೆ ಮಾಡಬಹುದೆಂದು ಸಮಾಜಕ್ಕೆ ತೋರಿಸಿಕೊಟ್ಟವರು ಡಾ.ಸದಾನಂದ ಪೂಜಾರಿಯವರುವೆಂದರು. ಈ ನಾಲ್ಕು ಪ್ರತಿಭೆಗಳನ್ನು ಗುರಿತಿಸಿ ಸನ್ಮಾನಿಸಿದಕ್ಕೆ ಕೃಷ್ಣ ಜೆ.ಪಾಲೆಮಾರ್ ಹಾಗೂ ರಾಮ ಕ್ಷತ್ರಿಯ ಸಂಘವನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಮುರಳಿಧರ ಸಿ.ಎಚ್, ಕಾರ್ಯದರ್ಶಿ ರವೀಂದ್ರ, ಕೋಶಾಧಿಕಾರಿ ದಿನೇಶ್ ಕುಮಾರ್ ಬೇಕಲ್ ರವರು ಉಪಸ್ಥಿತರಿದ್ದರು.