“ಬಲೇ ಬಲೇ ಗೈಸ್” ಅನ್ನುತ್ತಾ ಬಿಗ್ ಬಾಸ್ ಹೊರಟ ರಕ್ಷಿತಾ ಶೆಟ್ಟಿ!

ಮಂಗಳೂರು: ಬಿಗ್ ಬಾಸ್ ಸೀಸನ್ 12ಕ್ಕೆ ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಬಲೇ ಬಲೇ ಗೈಸ್ ಎನ್ನುತ್ತಾ ವಿಡಿಯೋ ಮಾಡುತ್ತಿದ್ದ ರಕ್ಷಿತಾ ಶೆಟ್ಟಿಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ. ಇವರ ಎಂಟ್ರಿಯ ವಿಡಿಯೋ ಕೂಡ ರಿಲೀಸ್ ಆಗಿದೆ.

ರಕ್ಷಿತಾ ಶೆಟ್ಟಿ ಉಡುಪಿ ಜಿಲ್ಲೆಯ ಕಾಪುವಿನ ಹುಡುಗಿ. ಮುಂಬೈಯಲ್ಲಿದ್ದ ರಕ್ಷಿತಾ ತುಳು ಕನ್ನಡದಲ್ಲಿ ವಿಡಿಯೋ ಮಾಡ್ತಾ ಇದ್ದಳು. ಕರಾವಳಿಯ ಈ ಬೆಡಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಎಂಟ್ರಿ ಅಲ್ಲಿಯೇ ಕಿಚ್ಚನಿಗೆ ನಗು ಬರೋ ರೀತಿನೇ ಮಾತನಾಡಿದ್ದಾರೆ.

ನೀವು ಚೆನ್ನಾಗಿ ಅಡುಗೆ ಮಾಡ್ತೀರಂತೆ, ನಿಮ್ಮ ಅಡುಗೆಯನ್ನ ಸವಿದು ಚೆನ್ನಾಗಿದೆ ಅಂತ ಹೇಳಿದವ್ರು ಯಾರು? ಕಿಚ್ಚನ ಈ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ಅಷ್ಟೆ ಮುಗ್ಧವಾಗಿಯೇ ಯಾರೂ ಇಲ್ಲ ಅಂತಲೇ ಹೇಳ್ತಾರೆ. ಆಗ ಕಿಚ್ಚನ ನಗುವ ಕಂಟ್ರೋಲ್‌ಗೇನೆ ಸಿಗೋದಿಲ್ಲ. ಆ ರೀತಿಯ ಈ ಹುಡುಗಿ ಬಿಗ್ ಬಾಸ್ ಮನೆ ಒಳಗೆ ಹೋಗಿ ಏನೆಲ್ಲ ಧಮಾಕಾ ಮಾಡ್ತಾರೆ ಅಂತ ಫ್ಯಾನ್ಸ್ ಕಾಯ್ತಾ ಇದ್ದಾರೆ.

error: Content is protected !!