ಉಚ್ಚಿಲ ದಸರಾ ಪ್ರಯುಕ್ತ ಕುಸ್ತಿ ಪಂದ್ಯಾಟ : ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ತಂಡಕ್ಕೆ ಪ್ರಶಸ್ತಿ

ಮಂಗಳೂರು: ಉಚ್ಚಿಲ ದಸರಾ ಪ್ರಯುಕ್ತ ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ ಉಡುಪಿ, ದ.ಕ. ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾಟ ರವಿವಾರ ಏರ್ಪಡಿಸಲಾಯಿತು.

ಕುಸ್ತಿ ಪಂದ್ಯಾಟದಲ್ಲಿ ʼಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ʼ ತಂಡವು 3 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಪುರುಷರ ವಿಭಾಗದಲ್ಲಿ ʼಉಚ್ಚಿಲ ದಸರಾ ಕೇಸರಿʼ ಹಾಗೂ ʼಉಚ್ಚಿಲ ದಸರಾ ಕುಮಾರ್ʼ ಹಾಗೂ ಮಹಿಳೆಯರ ವಿಭಾಗದಲ್ಲಿ ʼಉಚ್ಚಿಲ ದಸರಾ ಕುವರಿʼ ಕುಸ್ತಿ ಸ್ಪರ್ಧೆ ಹಾಗೂ ಎರಡು ವಿಭಾಗಗಳಲ್ಲಿ ದೇಹ ತೂಕದ ಮಾದರಿಯಲ್ಲಿ ಕುಸ್ತಿ ಸ್ಪರ್ಧೆ‌ ನಡೆಯಿತು.

42 ಕೆಜಿ ವಿಭಾಗದಲ್ಲಿ ಫಾಹಿಮ್ ಪ್ರಥಮ, 50 ಕೆಜಿ ವಿಭಾಗದಲ್ಲಿ ಇಶಾಮ್ ಪ್ರಥಮ, 61 ಕೆಜಿ ʼಉಚ್ಚಿಲ ದಸರಾ ಕುಮಾರ್ʼ ವಿಭಾಗದಲ್ಲಿ ನಶಾಲ್ ದ್ವಿತೀಯ ಬಹುಮಾನ ಪಡೆದುಕೊಂಡರು ಎಂದು ಪ್ರಕಟನೆ ತಿಳಿಸಿದೆ.

error: Content is protected !!