ಮಂಗಳೂರು: ಚರಣ್ ಹಾಗೂ ಮಮತಾ ದಂಪತಿ ಮುದ್ದು ಮಗಳು ಪ್ರಾಧ್ಯ(1ವರ್ಷ) ಜೊತೆ ಸುಖ ಸಂಸಾರ ನಡೆಸುತ್ತಿದ್ದರು. ಚರಣ್ ತನ್ನ ದುಡಿಮೆಯಿಂದ ಮಗಳು- ಮಡದಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಆ ದಿನ ನಡೆದ ಒಂದು ಘಟನೆ ಇಡೀ ಕುಟುಂಬವೇ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.
ಗುರುಪುರ ಶ್ಯಾನುಭೋಗ್ ಕಾಂಪೌಂಡ್‌ನಲ್ಲಿ ಪುಟ್ಟದೊಂದು ಮನೆಯಲ್ಲಿ ವಾಸವಾಗಿರುವ ಈ ಬಡ ಕುಟುಂಬಕ್ಕೆ ಬರಸಿಡಿಲು ಬಡಿದಂತೆ ಆಘಾತ ಎದುರಾಯಿತು. ಕೆಲದಿನಗಳ ಹಿಂದೆ ಸಾಯಂಕಾಲ ಮಮತಾ ಅವರು ತನ್ನ ಮುದ್ದು ಮಗಳು ಪ್ರಾಧ್ಯಳನ್ನು ಮಡಿಲಿನಲ್ಲಿ ಹಾಕಿ ಮನೆಯ ಜಗುಲಿಯಲ್ಲಿ ಕುಳಿತಿದ್ದರು. ಮಮತಾ ಅವರ ತಂದೆ ಬೇಯಿಸಿದ ಅನ್ನದ(ಗಂಜಿ ನೀರು) ಪಾತ್ರೆಯನ್ನು ಮನೆಯೊಳಗೆ ಕೊಂಡು ಹೋಗುವಾಗ ಅದು ಅವರ ಕೈಯಿಂದ ಆಕಸ್ಮಿಕವಾಗಿ ಜಾರಿ ಜಗುಲಿಯಲ್ಲಿ ಕುಳಿತ ಮಮತಾ ಹಾಗೂ ಮಡಿಲಲ್ಲಿರುವ ಪ್ರಾಧ್ಯಳ ಮೇಲೆಯೇ ಬಿದ್ದಿತ್ತು.
ಬಿಸಿಯಾದ ಗಂಜಿ ನೀರು ಪ್ರಾಧ್ಯಳ ಮುಖ ಹಾಗೂ ಇಡೀ ದೇಹಕ್ಕೆ ಬಿದ್ದು ಮೈತುಂಬಾ ಗುಳ್ಳೆಯಿಂದ ನೋವಿನಿಂದ ಎಜೆ ಆಸ್ಪತ್ರೆಯ ಐಸಿಯುನಲ್ಲಿ ನರಳಾಡುತ್ತಿದ್ದಾಳೆ. ಮಮತಾ ಅವರ ಎರಡೂ ಕಾಲುಗಳಿಗೂ ಬಿಸಿ ಗಂಜಿ ನೀರು ಬಿದ್ದಿದ್ದು ಅವರೂ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಸಂಸಾರದ ನೊಗವನ್ನು ಸಾಗಿಸುತ್ತಿದ್ದ ಚರಣ್ ಮಡದಿ-ಮಗಳ ಪರಿಸ್ಥಿತಿಯನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಒಂದು ಕಡೆ ಚಿಕಿತ್ಸೆಗೆ ಹಣ ಹೊಂದಿಸಬೇಕು ಇನ್ನೊಂದೆಡೆ ಮಗಳು-ಮಡದಿ ನೋವಲ್ಲಿ ಒದ್ದಾಡುವುದನ್ನು ನೋಡಿ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ.
ವೈದ್ಯರು ಮಗುವಿನ ಚಿಕಿತ್ಸೆ ಹಾಗೂ ಪ್ಲಾಸ್ಟಿಕ್ ಸರ್ಜರಿಗೆ ಸುಮಾರು 7 ಲಕ್ಷ ಖರ್ಚಾಗುತ್ತದೆ ಎಂದಿದ್ದಾರೆ. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಚರಣ್‌ಗೆ ಅಷ್ಟು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ನೆಚ್ಚಿನ ವಾಯ್ಸ್ ಆಫ್ ಪಬ್ಲಿಕ್ ಓದುಗರು ದೊಡ್ಡ ಮನಸ್ಸು ಮಾಡಿ ತಮ್ಮ ಕೈಲಾದ ನೆರವು ನೀಡುವಂತೆ ಮನವಿ ಮಾಡುತ್ತಿದ್ದೇವೆ. ನೀವು ಮಾಡುವ ಸಣ್ಣ ಸಹಾಯದಿಂದ ಇಡೀ ಒಂದು ಕುಟುಂಬದ ಕಣ್ಣೀರು ಒರೆಸಲು ಸಾಧ್ಯವಿದೆ.
ಸಹಾಯ ಮಾಡಲಿಚ್ಛಿಸುವವರು.
Contact Number: 9019425937 ಅನ್ನು ಬಳಸಬಹುದಾಗಿದೆ.