ಮುಂಬೈ: ಬಾಲಿವುಡ್ ನಟಿ ಅಮೀಷಾ ಪಟೇಲ್ ಇತ್ತೀಚೆಗೆ ಒಂದು ಪಾಡ್‌ಕ್ಯಾಸ್ಟ್‌ನಲ್ಲಿ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಿಂದಲೂ ಹಾಲಿವುಡ್ ಸೂಪರ್‌ಸ್ಟಾರ್ ಟಾಮ್ ಕ್ರೂಸ್ ಮೇಲೆ ತಮಗೆ ವಿಶೇಷ ಪ್ರೀತಿ ಇತ್ತು ಎಂದು ಅವರು ತಿಳಿಸಿದ್ದಾರೆ.
50 ವರ್ಷದ ಅಮೀಷಾ ಪಟೇಲ್ ಇನ್ನೂ ಅವಿವಾಹಿತರಾಗಿದ್ದು, ಅವಕಾಶ ಸಿಕ್ಕರೆ ಟಾಮ್ ಕ್ರೂಸ್ ಜೊತೆ ಒಂದು ರಾತ್ರಿ ಭೇಟಿಗೆ ಹಿಂಜರಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಾ, “ಟಾಮ್ ಕ್ರೂಸ್ ನನ್ನ ಶಾಲಾ ದಿನಗಳಿಂದಲೇ ನೆಚ್ಚಿನ ವ್ಯಕ್ತಿ. ನನ್ನ ಪೆನ್ಸಿಲ್ ಬಾಕ್ಸ್, ಫೈಲ್‌ಗಳು ಅವರ ಚಿತ್ರಗಳಿಂದಲೇ ತುಂಬಿದ್ದವು. ನನ್ನ ಕೋಣೆಯಲ್ಲಿ ಅವರ ಪೋಸ್ಟರ್ ಇತ್ತು. ಅವರಿಗಾಗಿ ನಾನು ನನ್ನ ಎಲ್ಲಾ ತತ್ವಗಳನ್ನು ರಾಜಿ ಮಾಡಿಕೊಳ್ಳಬಲ್ಲೆ” ಎಂದು ನಗುತ್ತಾ ಹೇಳಿದರು.
ಅಮೀಷಾ ಪಟೇಲ್ ಮದುವೆ ಕುರಿತು ಮಾತನಾಡುತ್ತಾ, ಹಲವಾರು ಪ್ರಪೋಸಲ್‌ಗಳು ಬಂದಿದ್ದರೂ ತಾನೀಗ ಮದುವೆಗೆ ನಿರ್ಧರಿಸಿಲ್ಲ, ಮದುವೆ ವೈಯಕ್ತಿಕ ಆಯ್ಕೆ ಎಂದರು.
2000ರಲ್ಲಿ ಕಹೋ ನಾ… ಪ್ಯಾರ್ ಹೈ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ ಅಮೀಷಾ, ರಾತ್ರೋರಾತ್ರಿ ತಾರೆಯಾಗಿದ್ದರು. ನಂತರ ಗದರ್: ಏಕ್ ಪ್ರೇಮ್ ಕಥಾ ಚಿತ್ರದಲ್ಲಿನ ಸಕಿನಾ ಪಾತ್ರವು ಅವರಿಗೆ ವಿಶೇಷ ಹೆಸರು ತಂದುಕೊಟ್ಟಿತು. ಹಮ್ರಾಜ್, ಭೂಲ್ ಭುಲೈಯಾ, ಯೇ ಹೈ ಜಲ್ವಾ, ಆಪ್ಕಿ ಖತಿರ್ ಮುಂತಾದ ಸಿನಿಮಾಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಗದರ್ 2 ಚಿತ್ರದಲ್ಲೂ ಅಮೀಷಾ ಪಟೇಲ್ ನಟಿಸಿದ್ದಾರೆ. ಟಾಮ್ ಕ್ರೂಸ್ ಮೇಲಿನ ಅಭಿಮಾನವನ್ನು ಅವರು ಹಿಂದೆಂದೂ ವ್ಯಕ್ತಪಡಿಸಿದ್ದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ, “ಯಾವುದೇ ನಟನೊಂದಿಗೆ ಪಾತ್ರ ಬದಲಾಯಿಸುವ ಅವಕಾಶ ಸಿಕ್ಕರೆ, ಅದು ಟಾಮ್ ಕ್ರೂಸ್ ಆಗಿರಬೇಕು” ಎಂದು ಹೇಳಿದ್ದರು.