ಬ್ರೇಕ್ ಫೇಲ್‌, ಓಮ್ನಿಗೆ ಡಿಕ್ಕಿಯಾಗಿ ಬಸ್ ಪಲ್ಟಿ : ಪ್ರಯಾಣಿಕರಿಗೆ ಗಂಭೀರ ಗಾಯ

ಮಡಿಕೇರಿ: ಬ್ರೇಕ್ ವಿಫಲಗೊಂಡ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ವೊಂದು ಓಮ್ನಿ ವಾಹನಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಮಡಿಕೇರಿ ಸಮೀಪ ತಾಳತ್ಮನೆ ತಿರುವಿನಲ್ಲಿ ಸೆ.24ರ ಬುಧವಾರ ರಾತ್ರಿ ನಡೆದಿದೆ.

ಮೈಸೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ಇಳಿಜಾರಿನಲ್ಲಿ ಖಾಸಗಿ ಬಸ್ ನ ಬ್ರೇಕ್ ವಿಫಲಗೊಂಡು ಮಡಿಕೇರಿ ಕಡೆಗೆ ಬರುತ್ತಿದ್ದ ಓಮ್ನಿಗೆ ಡಿಕ್ಕಿಯಾಗಿ ನಂತರ ಮಗುಚಿಕೊಂಡಿದೆ. ಈ ಪರಿಣಾಮ ಓಮ್ನಿಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಂಗಳೂರು ಮೂಲದ ಗಾಯಾಳುಗಳು ದಸರಾ ವ್ಯಾಪಾರಕ್ಕೆಂದು ಮಡಿಕೇರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.

ಅದೃಷ್ಟವಶಾತ್ ಬಸ್ ನಲ್ಲಿದ್ದ 17 ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಮಡಿಕೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಲ್ಟಿಯಾದ ಬಸ್ ನ್ನು ಕ್ರೇನ್ ಮೂಲಕ ಮೇಲೆತ್ತಲಾಗಿದೆ. ಅಪಘಾತದಿಂದ ಓಮ್ನಿ ಜಖಂಗೊಂಡಿದೆ.

error: Content is protected !!