ಬೆಳ್ತಂಗಡಿ: ಬೆಳ್ತಂಗಡಿ ನ್ಯಾಯಾಲಯಕ್ಕೆ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಇಂದು(ಸೆ.25) 11 ಗಂಟೆಗೆ ಶಿವಮೊಗ್ಗ ಜೈಲಿನಿಂದ ಕರೆದುಕೊಂಡು ಬಂದಿದ್ದು 12 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
BNSS 183 ಹೇಳಿಕೆ ನೀಡಲು ಆಗಮಿಸಿದ್ದು, ಇಂದು ನ್ಯಾಯಾಲಯದಲ್ಲಿ ಸಂಜೆಯವರೆಗೆ ನ್ಯಾಯಾಧೀಶರು ಚಿನ್ನಯ್ಯನ ಹೇಳಿಕೆ ಮಾತ್ರ ದಾಖಲು ಮಾಡಲಿದ್ದಾರೆ.
ಬುರುಡೆ ಚಿನ್ನಯ್ಯ ಸೆ.23ರಂದು ನ್ಯಾಯಾಧೀಶರ ಮುಂದೆ ಹಾಜರಾಗಿ ಕಣ್ಣೀರಲ್ಲೇ ಹೇಳಿಕೆ ನೀಡಿದ್ದ ಎನ್ನಲಾಗಿದೆ. ಈತನ ಹುಟ್ಟು, ಶಿಕ್ಷಣ, ಬಾಲ್ಯ, ಉದ್ಯೋಗ, ಕುಟುಂಬ ಹಾಗೂ ವೈವಾಹಿಕ ಜೀವನ ಸೇರಿದಂತೆ ತಾನು ಬೆಳೆದು ಬಂದ ವಿಚಾರಗಳ ಬಗ್ಗೆ ಸಂಪೂರ್ಣ ಹೇಳಿಕೆ ನೀಡಿದ್ದ ಎನ್ನಲಾಗಿದೆ. ಈ ವೇಳೆ ಬುರುಡೆ ಪ್ರಕರಣದ ವಿಚಾರವಾಗಿ ಮಹತ್ವದ ಹೇಳಿಕೆ ಪಡೆದಿರಲಿಲ್ಲ. ಹಾಗಾಗಿ ಕಲಾಪ ಒಂದರಲ್ಲಿ ಚಿನ್ನಯ್ಯನ ಜೀವನ ಚರಿತ್ರೆ ದಾಖಲಾಗಿದೆ. ಇಂದು(ಸೆ.25) ಚಿನ್ನಯ್ಯನ ಜೀವನದಲ್ಲಿ ನಡೆದ ಧರ್ಮಸ್ಥಳ ಪ್ರಕರಣದ ಸುತ್ತ ಹೇಳಿಕೆ ದಾಖಲಾಗಲಿರುವುದರಿಂದ ವಿಶೇಷ ಕಲಾಪವಾಗಿ ಸಮಯ ಮೀಸಲಿರಿಸಲಾಗಿದೆ.