ಹೆದ್ದಾರಿಗೆ ಬಿದ್ದಿದ್ದ ಜಲ್ಲಿಕಲ್ಲು ಹೆಕ್ಕಿದ ಯುವಕರಿಗೆ ಮೆಚ್ಚುಗೆ !!

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಜಂಕ್ಷನ್ ನಲ್ಲಿ ಜಲ್ಲಿಕಲ್ಲು ಸಾಗಾಟ ಮಾಡುತ್ತಿದ್ದ ಟ್ರಕ್ ನಿಂದ ಭಾರಿ ಪ್ರಮಾಣದಲ್ಲಿ ಜಲ್ಲಿಕಲ್ಲು ಹೆದ್ದಾರಿಗೆ ಬಿದ್ದಿದ್ದು ದ್ವಿಚಕ್ರ ಸವಾರರು ಸ್ಕಿಡ್ ಆಗಿ ಬೀಳುವ ಅಪಾಯವಿತ್ತು.


ತಕ್ಷಣ ಇದನ್ನು ಮನ ಗಂಡು ಸ್ಥಳೀಯ ಯುವಕರು, ವ್ಯಾಪಾರಿಗಳು ಹೆದ್ದಾರಿ ಗತ್ತು ಪೊಲೀಸರ ಸಹಾಯದೊಂದಿಗೆ ಒಟ್ಟು ಸೇರಿ ಜೆಲ್ಲಿ ಕಲ್ಲುಗಳನ್ನ ಗುಡಿಸಿ ಸ್ವಚ್ಛಗೊಳಿಸುವಲ್ಲಿ ಶ್ರಮಿಸಿದರು.


ಸುಮಾರು 10 ಬುಟ್ಟಿಗಳಷ್ಟು ಜಲ್ಲಿಕಲ್ಲು ಹರಡಿಕೊಂಡಿತ್ತು. ಸ್ಥಳೀಯ ಯುವಕರ ತುರ್ತು ಸ್ಪಂದನೆ ಮೆಚ್ಚುಗೆಗೆ ಪಾತ್ರವಾಯಿತು.

error: Content is protected !!