ನವದೆಹಲಿ: ಹದಿಮೂರು ವರ್ಷದ ಬಾಲಕನೋರ್ವ ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ ಕುಳಿತು ಅಫ್ಘಾನಿಸ್ತಾನದಿಂದ ದೆಹಲಿಗೆ ಬಂದಿಳಿದ ಘಟನೆಯೊಂದು ಭಾನುವಾರ (ಸೆ.21) ಬೆಳಕಿಗೆ ಬಂದಿದೆ.
ಅಫ್ಘಾನಿಸ್ತಾನದ ಕಾಬೂಲ್ ನಿಂದ ಪ್ರಯಾಣಿಕರನ್ನು ಹೊತ್ತು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣಕ್ಕೆ ಹನ್ನೊಂದು ಗಂಟೆಯ ಸುಮಾರಿಗೆ ಬಂದಿಳಿದಿದೆ. ಈ ವೇಳೆ ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಬಾಲಕನೊಬ್ಬ ಕೆಳಗಿಳಿದು ವಿಮಾನದ ಸುತ್ತ ತಿರುಗಾಡುತ್ತಿರುವುದು ಭದ್ರತಾ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿದೆ ಕೂಡಲೇ ಬಾಲಕನನ್ನು ವಿಚಾರಿಸಿದ ವೇಳೆ ಆತ ತಾನು ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಕುಳಿತು ಬಂದಿರುವುದಾಗಿ ಹೇಳಿಕೊಂಡಿದ್ದಾನೆ.
ಬಾಲಕನನ್ನು ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ತಾನು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಕಟ್ಟು ತಪ್ಪಿಸಿ ಪ್ರವೇಶಿಸಿ ಅಲ್ಲಿದ್ದ (KAM Airlines) ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಇರುವ ಜಾಗದಲ್ಲಿ ಅವಿತು ಕುಳಿತ್ತಿದ್ದೆ ಅದು ನಿಜಕ್ಕೂ ಎಲ್ಲಿಗೆ ಹೋಗುವ ವಿಮಾನ ಎಂಬುದು ನನಗೆ ಗೊತ್ತಿರಲಿಲ್ಲ ವಿಮಾನದಲ್ಲಿ ಸುಮಾರು ಎರಡು ಗಂಟೆಗಳಷ್ಟು ಕಾಲ ಹಾರಾಟ ನಡೆಸಿ ಬಳಿಕ ಲ್ಯಾಂಡಿಂಗ್ ಆಗಿದೆ ಎಂದು ಹೇಳಿಕೊಂಡಿದ್ದಾನೆ, ಬಳಿಕ ಬಾಲಕನನ್ನು ಅದೇ ವಿಮಾನದ ಮೂಲಕ ಅಧಿಕಾರಿಗಳು ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.