ಮಂಗಳೂರು: ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟಿಸಿದ್ದ ದಿವಂಗತ ರಾಕೇಶ್ ಪೂಜಾರಿ ಅವರನ್ನು ಕೂಡ ಟ್ರೇಲರ್ನಲ್ಲಿ ತೋರಿಸಲಾಗಿದೆ. ಈ ಸಂದರ್ಭದಲ್ಲಿ ಇವರು ಇರಬೇಕಿತ್ತು ಎಂದು ಜನರು ವಿಷಾದ ವ್ಯಕ್ತಪಡಿಸಿದ್ದಾರೆ.
ಸಿನಿಮಾದಲ್ಲಿ ರಾಕೇಶ್ ಪೂಜಾರಿ ನಟಿಸಿದ್ದಾರೆ. ಅವರು ಶೂಟ್ನ ಕೆಲಸಗಳು ಬಾಕಿ ಇರುವಾಗಲೇ ನಿಧನ ಹೊಂದಿದ್ದರು. ಸಿನಿಮಾದ ಟ್ರೇಲರ್ನಲ್ಲಿ ಅವರ ಪಾತ್ರವನ್ನು ತೋರಿಸಲಾಗಿದೆ. ಈ ಚಿತ್ರದಲ್ಲಿ ರಾಕೇಶ್ ಪೂಜಾರಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ ಎಂದು ತಂಡದವರೇ ಮಾಹಿತಿ ನೀಡಿದ್ದರು. ಅವರ ಪಾತ್ರ ಯಾವ ರೀತಿಯಲ್ಲಿ ಇದೆ ಎಂಬುದರ ಝಲಕ್ ಟ್ರೇಲರ್ನಲ್ಲಿ ತೋರಿಸಲಾಗಿದೆ.
‘ಕಾಂತಾರ: ಚಾಪ್ಟರ್ 1’ ಶೂಟ್ ಪೂರ್ಣಗೊಳಿಸಿದ ಬಳಿಕ ಮದುವೆ ಒಂದಕ್ಕೆ ರಾಕೇಶ್ ತೆರಳಿದ್ದ ವೇಳೆ ಅವರು ಭರ್ಜರಿಯಾಗಿ ಸ್ಟೆಪ್ ಹಾಕಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿ ನಿಧನ ಹೊಂದಿದರು.
ಚಿತ್ರದಲ್ಲಿ ರುಕ್ಮಿಣಿ ವಸಂತ್ ಹಾಗೂ ರಿಷಬ್ ಶೆಟ್ಟಿ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಂಸತ್ ಅವರು ಯುವರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಟ್ರೇಲರ್ನಲ್ಲಿ ರುಕ್ಮಿಣಿ ವಸಂತ್ ಅವರು ವಾರಿಯರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಕಾಂತಾರ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಿದ್ದರು.