ಮಂಗಳೂರು ವಿ.ವಿ. ಹಳೇ ವಿದ್ಯಾರ್ಥಿ ಸಂಘದ `ಮಾ’ ಇದಕ್ಕೆ ಅಧ್ಯಕ್ಷರಾಗಿ ರಾಮಕೃಷ್ಣ ರಾವ್ ಕೆ.ಎನ್ ಅವಿರೋಧ ಆಯ್ಕೆ

ಉಳ್ಳಾಲ: ಕಳೆದ ಮೂರು ತಲೆಮಾರುಗಳಿಂದ ಹಿಡಿದು 20,000 ಸದಸ್ಯರನ್ನು ಒಳಗೊಂಡ ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯದ ಹಳೇ ವಿದ್ಯಾರ್ಥಿ ಸಂಘ ಮಂಗಳ ಅಲ್ಯುಮಿನಿ ಅಸೋಸಿಯೇಷನ್ `ಮಾ’ ಇದರ ನೂತನ ಅಧ್ಯಕ್ಷರಾಗಿ 1986ರ ಬ್ಯಾಚ್ ನ ಸ್ಟಾಟಿಸ್ಟಿಕ್ಸ್ ಸ್ನಾತಕೋತ್ತರ ಪದವಿ ಪಡೆದ ಹಳೇ ವಿದ್ಯಾರ್ಥಿ ಮೂಲತ: ಉಳ್ಳಾಲ ಸದ್ಯ ಚಿಕ್ಕಮಗಳೂರು ಮೂಡಿಗೆರೆಯಲ್ಲಿ ನೆಲೆಸಿರುವ ರಾಮಕೃಷ್ಣ ರಾವ್ ಕೆ.ಎನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಜಯಪ್ಪ ಕೆ.ಎಸ್, ದೇವಿಪ್ರಭಾ ಆಳ್ವ, ಸರೋಜಿನಿ ಬಿ.ಕೆ, ಪ್ರಧಾನ ಕರ‍್ಯದರ್ಶಿಗಳಾಗಿ ಗಣೇಶ್ ಸಂಜೀವ, ಜತೆ ಕರ‍್ಯದರ್ಶಿಗಳಾಗಿ ಹರ್ಷಿತಾ, ಉಮ್ಮಪ್ಪ ಪೂಜಾರಿ, ಕೋಶಾಧಿಕಾರಿ ಡಾ. ಚಂದು ಹೆಗ್ಡೆ, ಸಂಘಟನಾ ಕರ‍್ಯದರ್ಶಿಯಾಗಿ ಸುಬ್ರಹ್ಮಣ್ಯ ಟಿ., ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ವೇಣು ಶರ್ಮಾ, ರಾಜರಾಮ ರಾವ್.ಟಿ, ಎನ್.ಕೆ.ಹೀರೇಗೌಡ, ಡಾ. ಪ್ರಭಾಕರ ನೀರುಮಾರ್ಗ, ಸದಾನಂದ ಶೆಟ್ಟಿ, ಪ್ರೊ.ವಿ.ಜಿ ಭಟ್, ಪ್ರದೀಪ್ ಡಿಸೋಜ, ಸುಷ್ಮಾ, ಸುಧಾ ವಿ ವೈದ್ಯ, ಪ್ರೊ.ಇಕ್ಬಾಲ್ , ಪ್ರೊ.ಇಸ್ಮಾಯಿಲ್, ಶ್ರುತಿ ಶೆಟ್ಟಿ, ಡಾ.ವನಜ, ಪ್ರೊ.ಮಂಜುನಾಥ್ ಪಟ್ಟಾಭಿ, ಡಾ.ವಿಶ್ವನಾಥ ಆಯ್ಕೆಗೊಂಡಿದ್ದಾರೆ. ಮಂಗಳೂರು ವಿ.ವಿಯಲ್ಲಿರುವ ʼಮಾʼ ಕಚೇರಿಯಲ್ಲಿ ನಡೆಸಿದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಡಾ.ಪರಮೇಶ್ವರ್ ಭಾಗವಹಿಸಿದ್ದರು.

ಮಾಧ್ಯಮಗಳ ಜತೆಗೆ ಮಾತನಾಡಿದ ನೂತನ ಅಧ್ಯಕ್ಷರಾದ ರಾಮಕೃಷ್ಣ ರಾವ್ ಇವರು ಚುನಾವಣೆ ಎಲ್ಲಾ ಸಂಸ್ಥೆಗಳಲ್ಲಿಯೂ ನಡೆಯಬೇಕು, ಪ್ರತಿಸ್ಪರ್ಧಿಗಳೇ ಇಲ್ಲ ಎಂದಾದಲ್ಲಿ ಸಂಸ್ಥೆ ಉಳಿಯುವುದೇ ಕಷ್ಟವಾಗಿರುತ್ತದೆ. ವಿಚಾರಗಳನ್ನು ಚರ್ಚೆ ನಡೆಸಿ ಸಂಸ್ಥೆಯನ್ನು ಬೆಳೆಸುವ ಉದ್ದೇಶದೊಂದಿಗೆ ಸ್ಪರ್ಧಿಸಲು ಮುಂದಾಗಿದ್ದೆವು. ಆಂತರಿಕ ಪ್ರಜಾಪ್ರಭುತ್ವದ ಜಾಗೃತಿಯೂ ಚುನಾವಣೆ ಮೂಲಕ ಆಗುವುದು. ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮೂರು ತಲೆಮಾರುಗಳು ತರಬೇತಿಯನ್ನು ಪಡೆದಿರುವುದನ್ನು ಅಷ್ಟೂ ತಲೆಮಾರುಗಳ 20,000 ಮಂದಿ ಸದಸ್ಯರು ಸಂಸ್ಥೆಯಲ್ಲಿದ್ದಾರೆ.

2015ರಲ್ಲಿ ಮಂಗಳ ಅಲ್ಯುಮಿನಿ ಅಸೋಸಿಯೇಷನ್ ಸಂಸ್ಥೆ ಆರಂಭವಾದರೂ 1990 ರಿಂದ ಹಿಡಿದು 2015 ರವರೆಗಿನ ಸ್ನಾತಕೋತ್ತರ ಪಡೆದ ಹಳೇ ವಿದ್ಯಾಥಿಗಳೆಲ್ಲರೂ ಸದಸ್ಯರುಗಳಾಗಿದ್ದಾರೆ. ತಾನು 1996ರ ಬ್ಯಾಚ್ ವಿದ್ಯಾರ್ಥಿ ಆಗಿರುವುದರಿಂದ ಹಳೇಯ ಕೊಂಡಿಯಾಗಿದ್ದು, ಈ ನಿಟ್ಟಿನಲ್ಲಿ ಕೊನೇಯ ಅವಕಾಶವಾಗಿದೆ. ಮುಂದಿನ ಪೀಳಿಗೆಗೆ ಹೆಜ್ಜೆಗುರುತು ಇಡಬೇಕೆಂಬ ಉದ್ದೇಶೊಂದಿಗೆ ಸಂಸ್ಥೆಯ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯುವ ಉದ್ದೇಶದೊಂದಿಗೆ 20,000 ಸದಸ್ಯರನ್ನು ಸಂಪಕಿಸಿ, ಒಂದೇ ವೇದಿಕೆಯಲ್ಲಿ ತಂದು ಇರಿಸುವ ಪ್ರಯತ್ನಕ್ಕೆ ನೂತನ ಪದಾಧಿಕಾರಿಗಳು ಒಗ್ಗಟ್ಟಾಗಿ ದುಡಿಯಲಿದ್ದೇವೆ ಎಂದರು.

1986 ಸ್ಟಾಟಿಸ್ಟಿಕ್ಸ್ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ರಾಮಕೃಷ್ಣ ರಾವ್, ಬಳಿಕ ಬೆಂಗಳೂರು ಸಂಸ್ಥೆಯಲ್ಲಿ ಉಪನ್ಯಾಸಕರಾಗಿ, 2003ರಲ್ಲಿ ಆಕ್ರಟ್ ಇನ್ಫರ‍್ಮಾಟಿಕ್ಸ್ ಸಂಸ್ಥೆಯ ಕಾಲ್‌ಸೆಂಟರ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ, ಇದೀಗ ಮೂಡಿಗೆರೆಯಲ್ಲಿ ರೆಸಾರ್ಟ್ ನಡೆಸುತ್ತಾ ಬಂದಿರುವರು. ಜೊತೆಗೆ ಪತ್ನಿ ಜೊತೆಗೆ ರಾಜ್ಯದುದ್ದಕ್ಕೂ ಹಲವು ಕೇಂದ್ರಗಳಿರುವ ಶ್ರೀ ಸಿದ್ದಿ ಅನ್ನುವ ವೆಲ್‌ನೆಸ್ ಸೆಂಟರನ್ನು ನಡೆಸುತ್ತಾ ಬಂದಿರುತ್ತಾರೆ.

error: Content is protected !!