ನವದೆಹಲಿ: ‘‘ಪಾಕಿಸ್ತಾನಕ್ಕೆ ಹೋದರೆ ಮನೆಗೆ ಹೋದ ಅನುಭವವಾಗುತ್ತೆ’’ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಕೇಂದ್ರ ಸರ್ಕಾರವು ತನ್ನ ವಿದೇಶಾಂಗ ನೀತಿಯನ್ನು ಮುಖ್ಯವಾಗಿ ಅದರ ನೆರೆಹೊರೆಯ ದೇಶಗಳ ಮೇಲೆ ಕೇಂದ್ರೀಕರಿಸಬೇಕೆಂದು ಅವರು ಒತ್ತಾಯಿಸಿದರು. ಪಾಕಿಸ್ತಾನಕ್ಕೆ ಭೇಟಿ ನೀಡುವುದರಿಂದ ತಮಗೆ ಮನೆಯಲ್ಲಿರುವಂತೆ ಭಾಸವಾಗುತ್ತದೆ ಎಂದು ಹೇಳಿದ್ದರು. ಪಿತ್ರೋಡಾ ಅವರ ಹೇಳಿಕೆಯಿಂದಾಗಿ ಬಿಜೆಪಿ ಈಗ ಕಾಂಗ್ರೆಸ್ ಮೇಲೆ ಟೀಕಾ ಪ್ರಹಾರ ನಡೆಸುತ್ತಿದೆ.
ಸ್ಯಾಮ್ ಪಿತ್ರೋಡಾ ಪಾಕಿಸ್ತಾನ ತನ್ನ ‘ತವರು’ ಎಂದು ಭಾವಿಸುವುದಾಗಿ ಹೇಳಿದ್ದಾರೆ. 26/11 ಉಗ್ರ ದಾಳಿಯ ನಂತರ ಯುಪಿಎ ಪಾಕಿಸ್ತಾನದ ವಿರುದ್ಧ ಯಾವುದೇ ಬಲವಾದ ಕ್ರಮ ಕೈಗೊಳ್ಳದಿರುವುದರಲ್ಲಿ ಅಚ್ಚರಿ ಏನಿಲ್ಲ ಎಂದು ಬಿಜೆಪಿ ಹೇಳಿದೆ.
ನಾನು ಬಾಂಗ್ಲಾದೇಶಕ್ಕೆ ಹೋಗಿದ್ದೇನೆ, ನಾನು ನೇಪಾಳಕ್ಕೆ ಹೋಗಿದ್ದೇನೆ ಎಲ್ಲಾ ಕಡೆಯೂ ನನಗೆ ಬೇರೆ ದೇಶದಲ್ಲಿರುವಂತೆ ಭಾಸವಾಗಿಲ್ಲ ಎಂದು ಹೇಳಿದರು. ಈ ಹಿಂದೆ ಚೀನಾ ದೇಶ ನಮ್ಮ ಶತ್ರುವಲ್ಲ ಎಂಬ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಭಾರತ-ಚೀನಾ ವಿವಾದವು ಯಾವಾಗಲೂ ಹೆಚ್ಚಾಗಿ ಅತಿರೇಕಕ್ಕೆ ಹೋಗುತ್ತದೆ. ಆದರೆ, ಅದರ ಅವಶ್ಯಕತೆಯಿಲ್ಲ ಎಂದು ಹೇಳಿದ್ದರು.