ಬೆಳ್ತಂಗಡಿ: ಧರ್ಮಸ್ಥಳ ತಾಲೂಕಿನ ನೇತ್ರಾವತಿ ನದಿ ತೀರದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಎರಡು ದಿನ ಎಸ್.ಐ.ಟಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಯಾದ ತಲೆಬರುಡೆ ಸಹಿತ ಅಸ್ಥಿಪಂಜರಗಳು ಎಲ್ಲವೂ ಪುರುಷರದ್ದೇ ಎಂದು ತಜ್ಞ ವೈದ್ಯರು ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ.17 ರಂದು ಐದು ತಲೆಬರುಡೆ ಸಹಿತ ಅಸ್ಥಿಪಂಜರಗಳನ್ನು ಮಹಜರು ನಡೆಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಮತ್ತು ಸೆ.18 ರಂದು ಕೂಡ ಎರಡು ತಲೆಬರುಡೆ ಸಹಿತ ಅಸ್ಥಿಪಂಜರಗಳನ್ನು ಮಹಜರು ನಡೆಸಿದ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಪ್ರಾಥಮಿಕ ತನಿಖೆ ಮಾಡಿದ ತಜ್ಞ ವೈದ್ಯರು ಏಳು ಅಸ್ಥಿಪಂಜರಗಳು ಕೂಡ ಪುರಷರದ್ದು ಎಂದು ದೃಢಪಡಿಸಿದ್ದಾರೆ.