ನಿನ್ನ ಅಜ್ಜನಜ್ಜನಜ್ಜನಜ್ಜನಜ್ಜನ ಅಜ್ಜ ಯಾರು? ಭಾರತದ ಜನಾಂಗೀಯ ಇತಿಹಾಸವನ್ನು ಬಿಚ್ಚಿಟ್ಟ ಜೀನೋಮ್ ಅಧ್ಯಯನ!!!

ಭರತಖಂಡದಲ್ಲಿ ಆರ್ಯರು-ದ್ರಾವಿಡರು ಎಂಬ ಸಿದ್ಧಾಂತವಿದ್ದು, ಈ ಸಿದ್ಧಾಂತವನ್ನು ಮುಂದಿಟ್ಟು ಇಂದಿಗೂ ಇಲ್ಲಿ ತಿಕ್ಕಾಟ ನಡೆಯುತ್ತದೆ. ಆರ್ಯರು ವಿದೇಶದಿಂದ ಭಾರತಕ್ಕೆ ವಲಸೆ ಬಂದವರಾಗಿದ್ದು, ದ್ರಾವಿಡರು ಇಲ್ಲಿನ ಮೂಲ ನಿವಾಸಿಗಳು. ಆರ್ಯರು ದ್ರಾವಿಡರ ಮೇಲೆ ದಬ್ಬಾಳಿಕೆ ನಡೆಸಿದರು ಎಂದೆಲ್ಲಾ ಕಟ್ಟುಕಥೆಗಳಿವೆ. ಆದರೆ ಇದೀಗ ಅದಕ್ಕಿಂತ ವ್ಯತಿರಿಕ್ತವಾದ ಸಂಶೋಧನೆಯೊಂದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ಅದೇ ಭಾರತೀಯರಲ್ಲಿ ನಿಯಾಂಡರ್ತಲ್ ಮತ್ತು ಡೆನಿಸೋವನ್ ಡಿಎನ್‌ಎ ಕಂಡು ಬಂದಿದೆ ಎನ್ನುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ…

ನಿಯಾಂಡರ್ತಲ್ ಅಂದರೆ ಯಾರು?
ನಿಯಾಂಡರ್ತಲ್ (Neanderthal) ಹೋಮೋ ಸಾಪಿಯನ್ಸ್ (ನಾವು, ಆಧುನಿಕ ಮಾನವರು) ಗಳ ಹತ್ತಿರದ ಸಂಬಂಧಿಗಳು. ಮಾರು 40,000 – 4,00,000 ವರ್ಷಗಳ ಹಿಂದೆ ಬದುಕಿದ್ದರು. ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲಿ ವಾಸವಿದ್ದರು. ಆಧುನಿಕ ಮಾನವರಿಗಿಂತ ಗಟ್ಟಿಯಾದ ದೇಹ, ದೊಡ್ಡ ಮೂಗು (ಚಳಿಗಾಲಕ್ಕೆ ಹೊಂದಿಕೊಳ್ಳಲು) ಹೊಂದಿದ್ದರು. ಬೆಂಕಿ ಹಚ್ಚುವುದು, ಕಲ್ಲಿನ ಸಾಧನ ತಯಾರಿಸುವುದು, ಬೇಟೆ ಮಾಡುವುದು ಇವರಿಗೆ ಬರುತಿತ್ತು. ತಮ್ಮ ಸತ್ತವರನ್ನು ಸಮಾಧಿ ಮಾಡುತ್ತಿದ್ದರೆಂಬ ಪುರಾವೆಗಳಿವೆ.

(ರಾಮಾಯಣದಲ್ಲಿ ಬರುವ ವಾನರರು ಮೂಲತಃ ಮಂಗನ ಜಾತಿಯವರಾಗದೆ ನಿಯಾಂಡರ್ತಲ್ ಆಗಿದ್ದು, ಅವರನ್ನು ವನ+ನರ ಎಂದು ಕರೆಯಲ್ಪಡುತ್ತಿದ್ದರು. ಹೋಮೋ ಸೆಪಿಯನ್ಸ್‌ ಹಾಗೂ ನಿಯಾಂಡರ್ತಲ್ ಗಳ ಸಂಬಂಧ ಬೆಳೆಸಿಕೊಂಡ ಕಾರಣ ಇಂದು, ಹೋಮೋ ಸೆಪಿಯನ್ಸ್‌ಗಳಾಗಿ ಬದಲಾಗಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.)

ಡೆನಿಸೋವನ್ ಅಂದರೆ ಯಾರು?
ಡೆನಿಸೋವನ್ ಎಂದರೆ ಆಧುನಿಕ ಮಾನವರ ಸಂಬಂಧಿಗಳು. ಇವರು 50,000–3,00,000 ವರ್ಷಗಳ ಹಿಂದೆ ಏಷ್ಯಾದ ವಿವಿಧ ಭಾಗಗಳಲ್ಲಿ ಬದುಕಿದ್ದರು. ಅವರ ದೇಹದ ಅವಶೇಷಗಳು (ಹಲ್ಲು, ಎಲುಬು) ಮೊದಲ ಬಾರಿಗೆ ಸೈಬೀರಿಯಾದ ಡೆನಿಸೋವಾ ಗುಹೆ (Denisova Cave) ಯಲ್ಲಿ ಪತ್ತೆಯಾದವು. ಆ ಕಾರಣದಿಂದ ಅವರಿಗೆ “ಡೆನಿಸೋವನ್” ಎಂಬ ಹೆಸರು ಬಂತು. ಡೆನಿಸೋವನ್‌ಗಳು ನೇರವಾಗಿ Homo sapiens ಜೊತೆ ಸಂಬಂಧ ಬೆಳೆಸಿ ಮಕ್ಕಳನ್ನು ಪಡೆದರು. ಆ ಕಾರಣದಿಂದ ಇಂದಿನ ಏಷ್ಯಾ, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾದ ಜನರಲ್ಲಿ ಅವರ ಡಿಎನ್‌ಎಯ ಕೆಲವು ಭಾಗಗಳು ಹಾಗೆಯೇ ಉಳಿದಿವೆ.

ಭಾರತದಲ್ಲಿ ಮಾನವನ ವಿಕಸನ ಹೇಗಾಯ್ತು ಎನ್ನುವುದು ಇಂದಿಗೂ ಸ್ಪಷ್ಟ ಸಿದ್ಧಾಂತಗಳು ಸಿಕ್ಕಿಲ್ಲ. ಮೂಲ ಭಾರತೀಯ ಡಿಎನ್‌ಎ ಹೊಂದಿರುವ ಮನುಷ್ಯನ ಕುಟುಂಬಸ್ಥರು ಇಂದು ಯಾರೂ ಬದುಕುಳಿದಿಲ್ಲ. ಬದುಕಿದ್ದರೂ ಇನ್ನಿತರ ಜನಾಂಗಗಳ ಡಿಎನ್‌ಎಯಿಂದ ಮಿಕ್ಸ್‌ ಆಗಿ ವಿಕಸನ ಹೊಂದಿದ್ದಾರೆ ಎನ್ನುವುದ ವಿಜ್ಷಾನಿಗಖ ವಾದ. ಏಕೆಂದರೆ, ಆಫ್ರಿಕಾದ ಹೊರತಾಗಿ ಮಾನವರು ಅತೀ ಪ್ರಾಚೀನ ಕಾಲದಲ್ಲೇ ನೆಲೆಸಿದ ಪ್ರದೇಶಗಳಲ್ಲಿ ಭಾರತವೂ ಒಂದು. ಆದರೆ ನಮ್ಮ ಪೂರ್ವಜರು ಹೇಗೆ ಬಂದರು? ಯಾರಿಂದ ಯಾವ ಆನುವಂಶಿಕ ಗುರುತುಗಳನ್ನು ಪಡೆದರು? — ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ.

ಜೀನೋಮ್ ಅಧ್ಯಯನ
ಅದಕ್ಕಾಗಿಯೇ ಇತ್ತೀಚೆಗೆ ವಿಜ್ಞಾನಿಗಳು 17 ರಾಜ್ಯಗಳಿಂದ 2,700 ಕ್ಕೂ ಹೆಚ್ಚು ಭಾರತೀಯರ ಜೀನೋಮ್‌ಗಳನ್ನು ವಿಶ್ಲೇಷಿಸಿದರು. ಜಿನೋಮ್‌ ಅಂದರೆ ಒಬ್ಬ ಜೀವಿಯ (ಉದಾ: ಮನುಷ್ಯ, ಸಸ್ಯ, ಪ್ರಾಣಿ, ಬ್ಯಾಕ್ಟೀರಿಯಾ) ದೇಹದಲ್ಲಿರುವ ಎಲ್ಲಾ ಡಿಎನ್‌ಎ (DNA) ಮಾಹಿತಿ. ಇದು ಈವರೆಗೆ ನಡೆದ ಅತಿದೊಡ್ಡ ಜೀನೋಮ್ ಅಧ್ಯಯನವಾಗಿತ್ತು. ಜಾತಿ, ಬುಡಕಟ್ಟು, ಭಾಷಾ ವೈವಿಧ್ಯತೆ — ಎಲ್ಲವೂ ಒಳಗೊಂಡಿರುವ ಈ ಮಾಹಿತಿಯು ಭಾರತದ ಜನಾಂಗೀಯ ಪುಟವನ್ನು ಅತ್ಯಂತ ವೈಜ್ಞಾನಿಕವಾಗಿ ಚಿತ್ರಿಸುತ್ತದೆ.

ಈ ಪ್ರಕಾರವಾಗಿ ವಿಜ್ಞಾನಿಗಳು ಭಾರತೀಯರ ಪೂರ್ವಜರನ್ನು ಮೂರು ಪ್ರಮುಖ ಪೂರ್ವಜ ಗುಂಪುಗಳನ್ನಾಗಿ ವರ್ಗೀಕರಿಸಿದ್ದಾರೆ.
ದಕ್ಷಿಣ ಏಷ್ಯಾದ ಬೇಟೆಗಾರ-ಸಂಗ್ರಹಕಾರರು
ಯುರೇಷಿಯನ್ ಸ್ಟೆಪ್ಪೆ ಪಶುಪಾಲಕರು
ಪ್ರಾಚೀನ ಇರಾನಿನ ರೈತರು

ಇವುಗಳಲ್ಲಿ ಮೂರನೆಯ ಗುಂಪಾದ ಇರಾನಿನ ರೈತರ ಮೂಲವನ್ನು ಈಗ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಅವರು ಆಧುನಿಕ ತಜಕಿಸ್ತಾನದ ಸರಜ್ಮ್ ಪ್ರದೇಶದ ಕೃಷಿಕರ ಸಮುದಾಯದಿಂದಲೇ ಬಂದವರಾಗಿದ್ದಾರೆ.

ನಿಯಾಂಡರ್ತಲ್- ಡೆನಿಸೋವನ್ ಸಂಯೋಗ
ಅಧ್ಯಯನವು ಇನ್ನೊಂದು ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟಿದೆ: ಭಾರತೀಯರ ಡಿಎನ್‌ಎಯಲ್ಲಿ 1–2% ನಿಯಾಂಡರ್ತಲ್ ಮತ್ತು ಡೆನಿಸೋವನ್ ಆನುವಂಶಿಕ ಅಂಶಗಳು ಇವೆ. ಇನ್ನೂ ವಿಶೇಷವೆಂದರೆ, ಆಫ್ರಿಕಾದ ಹೊರಗಿನ ಎಲ್ಲ ಜನಾಂಗಗಳಲ್ಲಿ ಕಂಡುಬರುವ ನಿಯಾಂಡರ್ತಲ್ ಜೀನ್ಸ್‌ಗಳಲ್ಲಿ ಸುಮಾರು 90% ಭಾರತೀಯರಲ್ಲಿ ಕಂಡುಬಂದಿದೆ. ಹಾಗಾಗಿ ನಾವು ಮನುಷ್ಯರೇ ಅಲ್ಲ. ವಿಕಸನಗೊಂಡು ಬದಲಾದ ಒಂದು ಮನುಷ್ಯರೂಪಿ ವಿಚಿತ್ರ ಜೀವಿಗಳು. ಇದು ಭಾರತದ ಆನುವಂಶಿಕ ವೈವಿಧ್ಯತೆಯ ಆಳವನ್ನು ತೋರಿಸುತ್ತದೆ.

ಹಾಗಾದರೆ ನಮ್ಮ ಪೂರ್ವಜರು ಕೇವಲ ಇರಾನ್‌ ಮಾತ್ರವಲ್ಲ, ಆಫ್ರಿಕಾ ಕೂಡಾ ಆಗಿದೆ. ಇದನ್ನು ಇನ್ನೂ ಅರ್ಥಮಾಡಿಕೊಳ್ಳಬೇಕೆಂದರೆ ಕೊಕ್ಟೇಲ್‌ ಇದ್ದ ಹಾಗೆ. ಒಂದು ಗ್ಲಾಸಿನಲ್ಲಿ ಬೇರೆ ಬೇರೆ ಬಗೆಯ ಮಧ್ಯವನ್ನು ಮಿಕ್ಸ್‌ ಮಾಡುತ್ತಾರಲ್ಲ ಹಾಗೆಯೇ ಭಾರತದ ಮಾನವನ ಡಿಎನ್‌ಎಗಳೂ ಕೊಕ್ಟೇಲ್‌ ತರ ಮಿಕ್ಸ್‌ ಆಗಿದೆ ಎಂಬಂತೆ ವಿಜ್ಞಾನಿಗಳ ಅಭಿಮತವಾಗಿದೆ.

ಜೀನೋಮಿಕ್ ವ್ಯತ್ಯಾಸವಾಗಲು ಕಾರಣವೇನು?
ಹಾಗಾದರೆ ಭಾರತೀಯರ ಜೀನೋಮಿಕ್ ವ್ಯತ್ಯಾಸವಾಗಲು ಕಾರಣವೇನು? ಅದಕ್ಕೂ ವಿಜ್ಞಾನಿಗಳು ಕಾರಣ ಹುಡುಕಿದ್ದಾರೆ. ಹೆಚ್ಚಿನ ಭಾರತೀಯರ ಜೀನೋಮಿಕ್ ವ್ಯತ್ಯಾಸಕ್ಕೆ ಕಾರಣ ಆ ಒಂದು ಮಹಾವಲಸೆಯಂತೆ. ಸುಮಾರು 50,000 ವರ್ಷಗಳ ಹಿಂದೆ ಆಫ್ರಿಕಾದಿಂದ ಮಾನವರು ಭಾರತಕ್ಕೆ ಬಂದಿದ್ದರು. ಯಾವಾಗ ಎಂದರೆ ಟೋಬಾ ಜ್ವಾಲಾಮುಖಿ ಸ್ಫೋಟ (74,000 ವರ್ಷಗಳ ಹಿಂದೆ)ಗೂ ಮುಂಚೆ ಅಂತೆ. ವಿಜ್ಞಾನಿಗಳ ಪ್ರಕಾರ ಈ ಭಾರತದಲ್ಲಿ ಮನುಷ್ಯರು ಇರಲೇ ಇಲ್ಲ ಎಂಬ ಹೊಸ ವಾದವನ್ನು ಮುಂದಿಟ್ಟಿದ್ದಾರೆ.

ಅವರ ಪ್ರಕಾರ ಭಾರತ ಎನ್ನುವ ಖಂಡ ಲಕ್ಷ ಲಕ್ಷ ವರ್ಷಗಳ ಹಿಂದೆ ಮನುಷ್ಯರೇ ಇಲ್ಲದ ಒಂದು ಖೋಲಿ ಹೊಡೆಯುತ್ತಿದ್ದ ಭೂಮಿ. ಎಲ್ಲೆಲ್ಲಿಂದಲೋ ಬಂದವರು ಭಾರತಕ್ಕೆ ವಲಸೆ ಬಂದು, ಇದೇ ಭೂಮಿಯನ್ನು ತನ್ನ ನೆಲೆಯನ್ನಾಗಿಸಿದರು. ಬೇರೆ ಬೇರೆ ಡಿಎನ್‌ಎ ಹೊಂದಿರುವ ಮಾನವರೊಂದಿಗೆ ಸಂಬಂಧ ಬೆಳೆಸಿದ ಪರಿಣಾಮ ವಿಭಿನ್ನವಾದ ಮನುಷ್ಯನ ಉತ್ಪತ್ತಿಗೆ ಕಾರಣರಾದರು. ಅವರೇ ನಮ್ಮ ಪೂರ್ವಜರು ಎನ್ನುವುದು ವಿಜ್ಞಾನಿಗಳ ವಾದ.

ಒಂದು ವೇಳೆ 50,000 ವರ್ಷಗಳ ಹಿಂದೆ ಭಾರತದಲ್ಲಿ ಜನರೇ ಇರಲಿಲ್ಲವಾಗಿದ್ದರೆ ಇಲ್ಲಿ ವಾಸಿಸುತ್ತಿದ್ದ ಜನರು ಯಾರು? ಅವರು ಎಲ್ಲಿಗೆ ಹೋದರು? ಒರಿಜಿನಲ್‌ ಡಿಎನ್‌ಎ ಹೊಂದಿರುವ ಭಾರತೀಯರು ಏನಾದರು? ನಿಯಾಂಡರ್ತಲ್ ಮತ್ತು ಡೆನಿಸೋವನ್‌ಗಳು ನಿಜವಾಗಿಯೂ ದಕ್ಷಿಣ ಏಷ್ಯಾದಲ್ಲೇ ಇದ್ದರೋ? ಅಥವಾ ಪೂರ್ವ ಯುರೇಷಿಯಾದಲ್ಲಿ ಸಮಾಗಮಗೊಂಡ ಜೀನ್ಸ್‌ಗಳು ನಂತರ ಭಾರತಕ್ಕೆ ಬಂದವೋ? ಎನ್ನುವುದನ್ನು ವಿಜ್ಞಾನಿಗಳು ಪತ್ತೆಹಚ್ಚಲಿಲ್ಲ. ಹಾಗಾಗಿ ವಿಜ್ಞಾನಿಗಳ ಈಗಿನ ಸಂಶೋಧನೆಯೋ ಒಂದು ಬಲವಾದ ಆಧಾರ ಎಂದು ವಾದಿಸಲು ಸಾಧ್ಯವಿಲ್ಲ.

ಒಬ್ಬ ಭಾರತೀಯರಲ್ಲಿ ನಿಮ್ಮ ಅಪ್ಪ ಯಾರು? ಅಪ್ಪನ ಅಪ್ಪ ಯಾರು? ಅಜ್ಜ ಯಾರು? ಅಜ್ಜನ ಅಜ್ಜ ಯಾರು? ಹೀಗೆ ನಿನ್ನ ಅಜ್ಜನಜ್ಜನಜ್ಜನಜ್ಜನಜ್ಜನ ಅಜ್ಜ ಯಾರು ಎಂದು ಕೇಳಲು ಹೋದಾಗ ನಮ್ಮ ಸಂಬಂಧಿಗಳು ಇರಾನ್‌, ತಜಕಿಸ್ತಾನ್‌, ಆಫ್ರಿಕಾ ಹೀಗೆ ಎಲ್ಲೆಂದರಲ್ಲಿ ಇದ್ದಾರೆ. ಅದನ್ನು ಭಾರತೀಯರು ʻವಸುಧೈವ ಕುಟುಂಬಕಂʼ ಎಂದರೆ ವಿಶ್ವವೇ ನನ್ನ ಕುಟುಂಬ ಎಂದು ಹೇಳಿಕೊಂಡಿರುವುದು.

-Girish Malali

error: Content is protected !!