ಕೆಂಪುಕಲ್ಲು ಸಮಸ್ಯೆಗಳೆಲ್ಲವೂ ಬಗೆಹರಿದಿದೆ: ಸ್ಪೀಕರ್‌ ಯು.ಟಿ. ಖಾದರ್

ಮಂಗಳೂರು: ಮೊನ್ನೆಯ ಕ್ಯಾಬಿನೆಟ್‌ ಸಭೆಯಲ್ಲಿ ಕೆಂಪು ಕಲ್ಲಿನ ಸಮಸ್ಯೆಗಳೆಲ್ಲವನ್ನೂ ಬಗೆಹರಿಸಲಾಗಿದೆ. ಇನ್ನು ಮುಂದೆ ಕೆಂಪು ಕಲ್ಲಿನ ದರ ಹಿಂದಿನ ದರಕ್ಕಿಂತ ಜಾಸ್ತಿಯಾಗಿರಲು ಸಾಧ್ಯವಿಲ್ಲ. ಸರ್ಕಾರಕ್ಕೆ ಸಲ್ಲಿಸಬೇಕಾದ ರಾಜಧನವನ್ನು ಕಡಿಮೆಗೊಳಿಸಲಾಗಿದ್ದು, ಹಿಂದೆ ಇದ್ದ ಷರತ್ತುಗಳನ್ನು ಸರಳೀಕರಣಗೊಳಿಸಲಾಗಿದೆ. ಇನ್ನು ಮುಂದೆ ವ್ಯಾಪಾರಸ್ಥರು ಕೆಂಪು ಕಲ್ಲು ವ್ಯಾಪಾರವನ್ನು ಧೈರ್ಯದಿಂದ, ಸ್ವಾಭಿಮಾನದಿಂದ ಮಾಡಬಹುದು ಎಂದು ವಿಧಾನ ಸಭಾ ಸ್ಪೀಕರ್‌ ಯು.ಟಿ. ಖಾದರ್‌ ಫರೀದ್‌ ಹೇಳಿದ್ದಾರೆ.

ಮಂಗಳೂರಿನ ಸರ್ಕ್ಯೂಟ್‌ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನು ಕರೆದು ಮಾತನಾಡಿದ ಅವರು, ಮೊನ್ನೆಯ ಕ್ಯಾಬಿನೆಟ್‌ನಲ್ಲಿ ಅಧಿಕಾರಿಗಳು, ಶಾಸಕರು, ಕೆಂಪು ಕಲ್ಲಿನವರು ಸೇರಿ ಕೆಂಪುಕಲ್ಲಿನ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಲಾಗಿದೆ. ಮೊದಲು ಪರ್ಮಿಟ್ ಇಲ್ಲದೆ ಕೆಂಪು ಕಲ್ಲು ತೆಗೆದು, ಯಾರ್ಯಾರಿಗೂ ಹಣ ಕೊಟ್ಟು ವ್ಯಾಪಾರ ಮಾಡ್ಬೇಕಿತ್ತು. ಆದರೆ ಇದೀಗ ಕಾನೂನು ಬದ್ದವಾಗಿ, ಆತ್ಮವಿಶ್ವಾಸ, ಸ್ವಾಭಿಮಾನದಿಂದ ವ್ಯಾಪಾರ ಮಾಡ್ಬಹುದು. ಇದಕ್ಕೆ ಮೊನ್ನೆ ಕ್ಯಾಬಿನೆಟ್ ಹಾಗೂ ಸಿಎಂ ಒಪ್ಪಿಗೆ ಸಿಕ್ಕಿದೆ. ಆರಂಭದಲ್ಲಿ50ರಕಲ್ಲಿ ರಲ್ಲಿ 25 ಲೈಸೆನ್ಸ್‌ಗೆ ಪರ್ಮಿಟ್ ಕೊಡಲಾಗಿದೆ. ಬಾಕಿ ಇರುವ ಲೈಸೆನ್ಸ್‌ಗೆ ನೋಡಿಕೊಂಡು ಪರ್ಮಿಟ್‌ ಕೊಡಲಾಗುವುದು ಎಂದು ಖಾದರ್‌ ಹೇಳಿದರು.

ಕೆಂಪು ಕಲ್ಲು ಮರಳು ಸಮಸ್ಯೆಗಳ ಕುರಿತು ಬಿಜೆಪಿ ನಡೆಸುವ ಪ್ರತಿಭಟನೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ರಾಜ್ಯದಲ್ಲಿ ಸರ್ಕಾರ-ಪ್ರತಿಪಕ್ಷ ಇದೆ ಅದನ್ನು ಸರ್ಕಾರ ನೋಡಿಕೊಳ್ಳುತ್ತದೆ ಎಂದರು.

ಕೆಂಪು ಕಲ್ಲು ಮಾರಾಟ ದರ ಕಡಿಮೆ!

ಜನಸಾಮಾನ್ಯರಿಗೆ ಸುಲಭ ಹಾಗೂ ಕಡಿಮೆ ದರದಲ್ಲಿ ಕೆಂಪು ಕಲ್ಲು ಸಿಗಬೇಕು. ಇನ್ನು ಮುಂದೆ ಹಿಂದಿನ ರೇಟ್‌ ಆಗಿರಲು ಸಾಧ್ಯವಿಲ್ಲ. ಹಿಂದಿನ ದರಕ್ಕಿಂತಲೂ ಕಲ್ಲು ಕಡಿಮೆ ಬೆಲೆಗೆ ಸಿಗಲಿದೆ. ಸ್ಯಾಂಡ್‌ ಬಝಾರ್‌ ರೀತಿ ಅಪ್ಲಿಕೇಷನ್‌ ರೀತಿ ಕಲ್ಲು ವಿತರಿಸುವ ಚಿಂತನೆ ಇದೆ ಈ ಬಗ್ಗೆ ಉಸ್ತುವಾರಿ ಸಚಿವರ ಜೊತೆ ಚರ್ಚಿಸಲಾಗುವುದು ಎಂದು ಖಾದರ್‌ ಹೇಳಿದರು.

ಹಿಂದೆ ಕಲ್ಲು ಗಣಿಗಾರಿಕೆಗೆ ಸಾಕಷ್ಟು ಷರತ್ತುಗಳಿದ್ದವು. ಆ ಷರತ್ತುಗಳನ್ನು ನೋಡಿದರೆ ಕಲ್ಲು ತೆಗೆಯಲು ಸಾಧ್ಯವೇ ಇರುತ್ತಿರಲಿಲ್ಲ. ಹಿಂದೆ ರಾಜಧನ 280 ರೂ. ಇತ್ತು. ಈಗ ಅದನ್ನು 70ಕ್ಕೆ ಇಳಿಸಿದ್ದು, ಅದಕ್ಕೆ ರೂ.20 ಜಿಎಸ್‌ಟಿ ಸೇರಿ 90 ರೂ. ನಿಗದಿಪಡಿಸಲಾಗಿದೆ. ಅಲ್ಲದೆ ಕಲ್ಲು ಗಣಿಗಾರಿಕೆ ಮಾಡಿದ ಮೇಲೆ ಅದನ್ನು ಮಣ್ಣು ಹಾಕಿ ಸಮತಟ್ಟು ಮಾಡುವ ಹಾಗೆ ಇರುವ ಷರತ್ತುಗಳನ್ನು ಪಾಲಿಸಬೇಕು ಎಂದರಲ್ಲದೆ, ಕಲ್ಲು ವ್ಯಾಪಾರಿಗಳು, ಗಾರೆ ಕೆಲಸ ಮಾಡುವವರು, ಜನಸಾಮಾನ್ಯರನ್ನು ನೋಡಿಕೊಂಡು ಕೆಂಪು ಕಲ್ಲು ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಖಾದರ್‌ ನುಡಿದರು.

ಸಿಆರ್ಝಡ್‌ ಹಾಗೂ ನಾನ್‌ ಸಿಆರ್‌ಝಡ್‌ ಸಮಸ್ಯೆಗಳಿಂದಾಗಿ ಮರಳು ಎತ್ತಲು ಸಮಸ್ಯೆಗಳಿವೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಬಗೆಹರಿಸಬೇಕಿದೆ. ಎಂಸ್ಯಾಂಡ್‌ ಇಂಡಸ್ಟ್ರಿ ಇಲ್ಲಿ ಸೆಟ್‌ ಆಗುವುದಿಲ್ಲ. ನಮ್ಮಲ್ಲಿ ಸಾಕಷ್ಟು ಸೀಝ್‌ ಆದರ ಮರಳು ಇದೆ. ಮೊದಲು ಅದನ್ನು ಸಾರ್ವಜನಿಕ ಕೆಲಸಗಳಿಗೆ ವಿತರಿಸಿ ಉಳಿದವನ್ನು ಗುತ್ತಿಗೆಯವರಿಗೆ ಕೊಡಲು ಚಿಂತನೆ ನಡೆದಿದೆ. ಗುತ್ತಿಗೆದಾರರು ಜಿಲ್ಲಾ ಡಿಡಿಯ ಒಪ್ಪಿಗೆ ಪಡೆದು ಮರಳು ವಿತರಣೆಗೆ ಮುಂದೆ ಬಂದಿದ್ದಾರೆ ಎಂದರು.

ನಾನು ಸ್ಪೀಕರ್‌ ಆಗಿದ್ದರೂ ಒಂದು ಹೆಜ್ಜೆ ಹೊರಗಿಟ್ಟು ಜಿಲ್ಲೆಗಳ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದೇನೆ. ನಾನು ಪಕ್ಷಾತೀತ ವ್ಯಕ್ತಿಯಾಗಿದ್ದು, ಜಿಲ್ಲೆಯ ಅಭಿವೃದ್ಧಿಗಾ

ಗಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ ಎಂದು ಖಾದರ್‌ ನುಡಿದರು.

ರಸ್ತೆ ಅಭಿವೃದ್ಧಿಗೆ 90 ಕೋಟಿ

ಮಂಗಳೂರು ವಿಧಾನ ಸಭಾ ಕ್ಷೇತ್ರದ ರಸ್ತೆಯನ್ನು ಮಳೆ‌ ನಿಂತ‌ ತಕ್ಷಣ ಸುಸ್ಥಿತಿಗೆ ತರಲು ಅಧಿಕಾರಿಗಳಿಗೆ ಕಳೆದ ತಿಂಗಳು ಸೂಚಿಸಿದ್ದೆ. ಅವರು ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ಅನುದಾನದ ವರದಿ ಸಲ್ಲಿಸಿದ್ದರು. ಇದೀಗ ಸುಮಾರು 90 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಎಲ್ಲ ರಸ್ತೆಗಳನ್ನೂ ಸುಸ್ಥಿಗೆ ತರುತ್ತೇವೆ. ತೊಕ್ಕೊಟ್ಟು, ಮುಡಿಪು, ಅಬ್ಬಕ್ಕ, ಕೋಟೆಪುರ ಕೋಡಿ, ದೇರಳಕ್ಕಟ್ಟೆ ಅಸೈಗೋಲಿ, ಮುದ್ಗರಕಟ್ಟೆ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು ಖಾದರ್‌ ಹೇಳಿದರು.

ಪ್ಯಾಚ್ ವರ್ಕ್ ಅಧಿಕಾರಿಗಳ ಜವಾಬ್ದಾರಿ. ಒಂದು ವೇಳೆ ಅನಾಹುತ ಸಂಭವಿಸಿದರೆ ಅದಕ್ಕೆ ಇಂಜಿನಿಯರ್‌ಗಳೇ ಜವಾಬ್ದಾರಿ. ಅಪಘಾತ ಆಗದಂತೆ ಜನಸಾಮಾನ್ಯರು ಕೂಡಾ ಎಚ್ಚರಿಕೆ ವಹಿಸಬೇಕು ಎಂದು ಕಿವಿ ಮಾತು ಹೇಳಿದರು. ಸೆ.22ರಿಂದ ಜಾತಿ ಗಣತಿ ಆರಂಭವಾಗಲಿದ್ದು, ಜನರು ಮೊದಲೇ ಸಿದ್ಧತೆ ನಡೆಸಿ ಸಹಕರಿಸಬೇಕು. ಆಶಾ ಕಾರ್ಯಕರ್ತರಲ್ಲಿ ಒಂದು ಮಾದರಿ ಫಾರ್ಮ್‌ ಇದ್ದು, ಅದನ್ನು ಭರ್ತಿ ಮಾಡಿಟ್ಟರೆ ಟೀಚರ್‌ಗಳು ಬಂದಾಗ ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.

error: Content is protected !!