4.3 ಓವರ್‌ಗಳಲ್ಲಿ ಗೆಲುವು: ಇತಿಹಾಸ ರಚಿಸಿದ ಟೀಂ ಇಂಡಿಯಾ

ಬೆಂಗಳೂರು: ಏಷ್ಯಾ ಕಪ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡಿ ಕೇವಲ 4.3 ಓವರ್‌ಗಳಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಭಾರತ ತಂಡ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಎರಡು ಅಂಕಗಳನ್ನು ಗಳಿಸಿದೆ.

ಟೀಂ ಇಂಡಿಯಾ ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ರವರು ಆರಂಭಿಕ ಬ್ಯಾಟಿಂಗ್ ಮಾಡಿದರು. ಅಭಿಷೇಕ್ ಕೇವಲ 16 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಿತ 30 ರನ್ ಗಳಿಸಿದರೆ, ಶುಭ್ಮನ್ ಗಿಲ್ 9 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 20 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 2 ಎಸೆತಗಳಲ್ಲಿ 7 ರನ್ ಗಳಿಸಿದರು. ಈ ಕ್ರಮಾವಳಿಯಿಂದಾಗಿ ಭಾರತ ತಂಡ ಕೇವಲ 4.3 ಓವರ್‌ಗಳಲ್ಲಿ ಗುರಿಯನ್ನು ತಲುಪಿತು.

ಏಷ್ಯಾ ಕಪ್ (ಏಕದಿನ ಮತ್ತು ಟಿ-20) ಇತಿಹಾಸದಲ್ಲಿ ಯಾವುದೇ ತಂಡವು 5 ಓವರ್‌ಗಳಿಗಿಂತ ಕಡಿಮೆ ಸಮಯದಲ್ಲಿ ಗುರಿ ತಲುಪಿದ್ದು ಇದೇ ಪ್ರಥಮವಾಗಿದೆ. ಕುಲದೀಪ್ ಯಾದವ್, ಅಭಿಷೇಕ್ ಶರ್ಮಾ ಮತ್ತು ಶಿವಂ ದುಬೆ ಅವರು ಟೀಂ ಇಂಡಿಯಾದ ಈ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಏಷ್ಯಾ ಕಪ್‌ನಲ್ಲಿ ಭಾರತದ ಮುಂದಿನ ಪಂದ್ಯ ಪಾಕಿಸ್ತಾನ ವಿರುದ್ಧವಾಗಿದ್ದು, ಸೆಪ್ಟೆಂಬರ್ 14ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ ರಾತ್ರಿ 8 ಗಂಟೆಗೆ (ಭಾರತೀಯ ಸಮಯ) ಆರಂಭವಾಗಲಿದೆ.

error: Content is protected !!